LATEST NEWS
1 ನೇ ತರಗತಿಗೆ 4.27 ಲಕ್ಷ ಫೀಸ್ – ಖಾಸಗಿ ಶಾಲೆಯೊಂದರ ಫೀಸ್ ಸ್ಲಿಪ್ ವೈರಲ್
ಜೈಪುರ ನವೆಂಬರ್ 20: ದೇಶದಲ್ಲಿ ಖಾಸಗಿ ಶಾಲೆಗಳಲ್ಲಿ ಶುಲ್ಕ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ. ಅದು ಎಲ್ ಕೆಜಿ ಯುಕೆಜಿಗೆ ಲಕ್ಷಕ್ಕೆ ಸ್ಕೂಲ್ ಫೀಸ್ ಹೋಗಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಶಾಲೆಯೊಂದರ 1 ನೇ ತರಗತಿ ಸ್ಕೂಲ್ ಫೀಸ್ ವೈರಲ್ ಆಗಿದೆ. ಬರೋಬ್ಬರಿ 4.27 ಲಕ್ಷ 1 ನೇ ತರಗತಿಗೆ ಶಾಲೆ ಫೀಸ್. ಇದೇ ವಿಷಯವನ್ನು ರಿಷಬ್ ಜೈನ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಿಷಬ್ ಜೈನ್ ಎಂಬುವವರು ತಮ್ಮ ಮಗಳಿಗೆ 1ನೇ ತರಗತಿ ಸೇರಿಸಲು ಅಂತ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಅವರು ನೀಡಿದ ಪ್ರವೇಶ ಶುಲ್ಕದ ಪಟ್ಟಿಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಒಂದು ವರ್ಷಕ್ಕೆ 4.27 ಲಕ್ಷ ರೂಪಾಯಿ ಫೀಸ್ ಇರುವುದನ್ನು ಕಂಡು ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ. ಉತ್ತಮ ಶಿಕ್ಷಣ ಎಂದರೆ ಅದು ಐಶಾರಾಮಿ ಶಿಕ್ಷಣವೇ ಎಂದು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಒಂದು ವೇಳೆ ವರ್ಷಕ್ಕೆ ನಾವು 20 ಲಕ್ಷ ರೂಪಾಯಿ ದುಡಿದರು ಕೂಡ ಈ ಒಂದು ಫೀಸ್ ಭರಿಸಲು ನಮ್ಮಿಂದ ಸಾಧ್ಯವೇ.ಇದು ಭಾರತದಲ್ಲಿ ಗುಣಮಟ್ಟ ಶಿಕ್ಷಣದ ದರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೀಸ್ ಸ್ಟ್ರಕ್ಚರ್ನಲ್ಲಿ ನೊಂದಣಿ ಶುಲ್ಕ 2 ಸಾವಿರ ರೂಪಾಯಿ, ಪ್ರವೇಶ ಶುಲ್ಕ 40 ಸಾವಿರ ರೂಪಾಯಿ, ವಾರ್ಷಿಕ ಶಾಲಾ ಶುಲ್ಕ 2 ಲಕ್ಷ 52 ಸಾವಿರ ರೂಪಾಯಿ ರಿಫಂಡೆಬಲ್ ಮನಿ 5 ಸಾವಿರ ರೂಪಾಯಿ, ಬಸ್ ಚಾರ್ಜ್ 1 ಲಕ್ಷ 8 ಸಾವಿರ ರೂಪಾಯಿ ಬುಕ್ ಹಾಗೂ ಸಮವಸ್ತ್ರದ ಶುಲ್ಕ 20 ಸಾವಿರ ರೂಪಾಯಿ. ಇವೆಲ್ಲವೂ ಸೇರಿ ವರ್ಷಕ್ಕೆ ಸುಮಾರು 4 ಲಕ್ಷ 27 ಸಾವಿರ ರೂಪಾಯಿ ಎಂದಿದೆ. ಜೈನ್ ಅವರು ಮಾಡಿರುವ ಈ ಒಂದು ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಖಾಸಗಿ ಶಾಲೆಗಳ ಧನದಾಹಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ.