LATEST NEWS
ಹತ್ತಿರದಲ್ಲೇ ಇದ್ದರೂ ಸಹಕಲಾವಿದ ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಬಾರದ ರಿಷಬ್ ಶೆಟ್ಟಿ – ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಉಡುಪಿ ಮೇ 14: ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನರಾಗಿದ್ದು, ಅವರ ಅಂತಿಮ ಕಾರ್ಯ ಹುಟ್ಟೂರು ಉಡುಪಿಯಲ್ಲಿ ನಡೆದಿತ್ತು ರಾಕೇಶ್ ಪೂಜಾರಿ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ನಟಿಸಿದ್ದರು, ಹತ್ತಿರದಲ್ಲೇ ಇದ್ದರೂ ನಟ ರಿಷಬ್ ಶೆಟ್ಟಿ ಮಾತ್ರ ರಾಕೇಶ್ ಅವರ ಅಂತಮ ದರ್ಶನಕ್ಕೆ ಆಗಮಿಸದೇ ಇದ್ದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಸಾವು ಎಲ್ಲರಿಗೂ ಶಾಕ್ ಆಗಿತ್ತು, ಸಾವಿರಾರು ಜನರು ರಾಕೇಶ್ ಅವರ ಸಾವಿಗೆ ಕಂಬನಿ ಮಿಡಿದಿದ್ದರು, ಜೀ ಕನ್ನಡ ವಾಹಿನಿಯಲ್ಲಿ ಅವರ ಜೊತೆ ಇದ್ದ ಸಹ ಕಲಾವಿದರು ಕಣ್ಣೀರು ಹಾಕುತ್ತಲೇ ಅಂತಿಮ ದರ್ಶನ ಪಡೆದಿದ್ದರು.

ರಾಕೇಶ್ ಪೂಜಾರಿ ಅವರ ಅಂತಿಮ ದರ್ಶನಕ್ಕೆ ನಿರ್ದೇಶಕ ಯೋಗರಾಜ್ ಭಟ್, ರಕ್ಷಿತಾ, ಅನುಶ್ರೀ, ಮಾಸ್ಟರ್ ಆನಂದ್ ಸೇರಿದಂತೆ ಇನ್ನೂ ಹಲವಾರು ಮಂದಿ ಕಲಾವಿದರು ಬೆಂಗಳೂರಿನಿಂದ ಬಂದಿದ್ದರು. ಆದರೆ ಇಲ್ಲೇ 30 ಕಿ.ಮೀ ದೂರದ ಬೈಂದೂರಿನಲ್ಲಿರುವ ರಿಷಬ್ ಶೆಟ್ಟಿ ರಾಕೇಶ್ ಪೂಜಾರಿಯ ಅಂತಿಮ ದರ್ಶನಕ್ಕೆ ಬಂದಿಲ್ಲ. ಘಟನೆ ನಡೆದು ಮೂರು ದಿನವಾದರೂ ಸೌಜನ್ಯಕ್ಕಾದರೂ ಅವರ ಕುಟುಂಬದವರನ್ನು ಭೇಟಿ ಆಗಿಲ್ಲ.
ತಮ್ಮದೇ ಸಿನೆಮಾದಲ್ಲಿ ನಟಿಸಿದ್ದ ಕಲಾವಿದ ,ಅಲ್ಲದೆ ರಿಷಬ್ ಶೆಟ್ಟಿ ಊರಿಗೆ ಸೇರಿದ್ದ ಕಲಾವಿದ ರಾಕೇಶ್ ಅವರ ಸಾವಿಗೂ ಬಾರದೇ ಇರುವುದಕ್ಕೆ ಟೀಕೆ ವ್ಯಕ್ತವಾಗಿದೆ.
‘500 ಕಿಮಿ ದೂರದಿಂದ ಬಂದವರ ನಡುವೆ 30 ಕಿಮಿ ದೂರದಲ್ಲಿದ್ದು ಬರಲು ಪುರಸೊತ್ತು ಇಲ್ಲವೇ’, ‘ಕಲಾವಿದನಿಗಿಂತ ಕಮರ್ಶಿಯಲ್ ಹೆಚ್ಚಾಯ್ತಾ’, ‘ಸಹ ಕಲಾವಿದನ ಜೀವಕ್ಕೆ ಇಷ್ಟೇನಾ ಬೆಲೆ’ ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ. ರಿಷಬ್ ಶೆಟ್ಟಿಯ ವರ್ತನೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ.