FILM
ಜೈಹನುಮಾನ್ ನಲ್ಲಿ ರಿಷಭ್ ಶೆಟ್ಟಿ – ಫಸ್ಟ್ ಲುಕ್ ರಿಲೀಸ್
ಬೆಂಗಳೂರು ಅಕ್ಟೋಬರ್ 30: ಕಾಂತಾರ ಅಧ್ಯಾಯ 1 ರ ಶೂಟಿಂಗ್ ನಡೆಯುತ್ತಿರುವ ನಡುವೆ ರಿಷಬ್ ಶೆಟ್ಟಿ ಇದೀಗ ಮತ್ತೊಂದು ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗಿನ ಸೂಪರ್ ಹಿಟ್ ಮೂವಿ ಹನುಮಾನ್ ನ ಮುಂದುವರಿದ ಭಾಗ ಜೈ ಹನುಮಾನ್ ನಲ್ಲಿ ರಿಷಬ್ ಶೆಟ್ಟಿ ನಟಿಸಲಿದ್ದಾರೆ.
ಪ್ರಶಾಂತ್ ವರ್ಮಾ ನಿರ್ದೇಶನದ ಹನು-ಮ್ಯಾನ್ ಸಿನಿಮಾ ತೆಲುಗು ಸಿನಿಮಾ ರಂಗದಲ್ಲಿ ಹಲವು ದಾಖಲೆ ಬರೆದಿದೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಸಿನಿಮಾ, ಸ್ಟಾರ್ ನಟರ ಸಿನಿಮಾಗಳಿಗೆ ಸಡ್ಡು ಹೊಡೆದು ಗಲ್ಲಾ ಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು.
ಇದೀಗ ಭಾರಿ ಬಜೆಟ್‌ನಲ್ಲಿ ಜೈ ಹನುಮಾನ್ ಸಿನಿಮಾವರನ್ನು ತೆರೆಗೆ ತರಲು ಸಿನಿಮಾ ತಂಡ ಸಜ್ಜಾಗಿದೆ. ಎರಡನೇ ಭಾಗದಲ್ಲಿ ಹನುಮನ ಪಾತ್ರ ಸಾಕಷ್ಟು ಪ್ರಮುಖವಾಗಿರುವ ಕಾರಣ, ದೊಡ್ಡ ನಟರೊಬ್ಬರು ಈ ಪಾತ್ರ ಮಾಡಬೇಕು ಎನ್ನುವುದು ಚಿತ್ರತಂಡದ ಆಸೆಯಾಗಿತ್ತು. ಸಿನಿಮಾ ತಂಡ ರಿಷಬ್ ಶೆಟ್ಟಿಯವರನ್ನು ಪಾತ್ರಕ್ಕಾಗಿ ಸಂಪರ್ಕಿಸಿದ್ದು, ರಿಷಬ್ ಶೆಟ್ಟಿ ಕೂಡ ಸಂತೋಷದಿಂದಲೇ ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಮುಂದುವರಿದ ಭಾಗ ‘ಜೈ ಹನುಮಾನ್’ ತೆರೆಗೆ ಬರಲಿದೆ. ಚಿತ್ರೀಕರಣ ನಡೆಯುತ್ತಿದ್ದು ಈ ಸಿನಿಮಾ ಕೂಡ 2025ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಜೈ ಹನುಮಾನ್ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಹನುಮನ ಪಾತ್ರ ಮಾಡುತ್ತಿದ್ದು ಇಂದು ಮೊದಲ ಲುಕ್ ರಿಲೀಸ್ ಮಾಡಿದ್ದಾರೆ.
ರಿಷಬ್ ಶೆಟ್ಟಿ ರಾಮನ ವಿಗ್ರಹ ಕುಳಿತಿರುವ ಹನುಮನ ಚಿತ್ರವನ್ನು ಹಂಚಿಕೊಂಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ. “ಕನ್ನಡ ನೆಲದ ವರಸುತ ಆಂಜನೇಯನ ಆಶೀರ್ವಾದದೊಂದಿಗೆ ಭಾರತ ಇತಿಹಾಸದ ಸರ್ವಶ್ರೇಷ್ಠ ಭಾವವೊಂದನ್ನು ತೆರೆಯ ಮೇಲೆ ತರಲಿದ್ದೇವೆ. ನಿಮ್ಮೆಲ್ಲರ ಪ್ರೀತಿ ಬೆಂಬಲ ಆಶೀರ್ವಾದ ಎಂದಿನಂತೆ ಸದಾ ಇರಲಿ – ಜೈ ಹನುಮಾನ್” ಎಂದು ಹೇಳಿದ್ದಾರೆ.
You must be logged in to post a comment Login