FILM
ಕಾಂತಾರ 2 ಬಗ್ಗೆ ಯಾವುದೇ ಉಹಾಪೋಹ ಹಬ್ಬಿಸಬೇಡಿ – ರಿಷಬ್ ಶೆಟ್ಟಿ

ಬೆಂಗಳೂರು ಡಿಸೆಂಬರ್ 13: ಕಾಂತಾರ 2 ಸಿನೆಮಾ ಕುರಿತಂತೆ ಇದೀಗ ಎದ್ದಿರುವ ಉಹಾಪೋಹಗಳಿಗೆ ಸ್ವತಃ ರಿಷಬ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದು, ಸದ್ಯ ಮುಂದಿನ ಸಿನೆಮಾ ಬಗ್ಗೆ ಯಾವುದೇ ರೀತಿಯ ತಯಾರಿ ನಡೆಸಿಲ್ಲ ಎಂದಿದ್ದಾರೆ.
ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗಿನ ಸಂವಾದದಲ್ಲಿ ಮಾತನಾಡಿದ ರಿಷಬ್ ಶೆಟ್ಟಿ ಕಾಂತಾರ2 ಚಿತ್ರದ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದ್ದಾರೆ. “ಪ್ರಾಮಾಣಿಕವಾಗಿ, ನಾನು ಕಾಂತಾರ ಅವರೊಂದಿಗಿನ ನನ್ನ ಬದ್ಧತೆಯನ್ನು ಇನ್ನೂ ಪೂರ್ಣಗೊಳಿಸುತ್ತಿದ್ದೇನೆ ಮತ್ತು ನನ್ನ ಮುಂದಿನ ಸಿನೆಮಾದ ಯೋಜನೆಯಲ್ಲಿ ನಾನು ಇನ್ನೂ ಕುಳಿತಿಲ್ಲ ಎಂದಿದ್ದಾರೆ.

ಕಾಂತಾರ 2 ಅಥವಾ ಇನ್ನಾವುದೇ ಪ್ರಾಜೆಕ್ಟ್ ಆಗಿರಲಿ ಅದರ ಬಗ್ಗೆ ನಾನು ಶೀಘ್ರದಲ್ಲೇ ಅಧಿಕೃತ ವಿವರಗಳನ್ನು ನೀಡುತ್ತೇವೆ ಎಂದು ಅವರು ಹೇಳಿದರು. ಮಂಗಳೂರಿನಲ್ಲಿ ಕಾಂತಾರ ತಂಡ ಕೋಲ ನಡೆಸಿಕೊಟ್ಟ ಬಗ್ಗೆ ಸ್ಪಷ್ಟನೆ ನೀಡಿದ ಅವರು ಇದು ನಮ್ಮ ತಂಡ ಚಿತ್ರದ ಯಶಸ್ಸಿಗೆ ದೇವರಿಗೆ ಮನಃಪೂರ್ವಕವಾಗಿ ಕೃತಜ್ಞತೆ ಸಲ್ಲಿಸಲು ತೆಗೆದುಕೊಂಡ ಹರಕೆ. ಇದು ದೇವಸ್ಥಾನದಲ್ಲಿ ಕಳೆದ ಒಂದು ಭಾವನಾತ್ಮಕ ಮತ್ತು ಸುಂದರ ಕ್ಷಣ. ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದಿದ್ದಾರೆ. ಆದರೆ ಕೋಲ ನಡೆಸಿದ್ದರಿಂದ ಅನೇಕ ಉಹಾಪೋಹಗಳು ಉಂಟಾಗಿವೆ ಎಂದರು.