LATEST NEWS
ಮುಖ್ಯಮಂತ್ರಿ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ ಕೊಟ್ಟ ರಿಷಬ್ ಶೆಟ್ಟಿ

ಉಡುಪಿ ಎಪ್ರಿಲ್ 14: ಕೊಲ್ಲೂರಿನಲ್ಲಿ ಅಕಸ್ಮಿಕವಾಗಿ ಸಿಕ್ಕ ರಿಷಬ್ ಶೆಟ್ಟಿ ಅವರನ್ನು ರಾಜಕೀಯವಾಗಿ ಬಳಸಲು ನೋಡಿದ ಸಿಎಂ ಬೊಮ್ಮಾಯಿ ಅವರಿಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು, ಭೇಟಿಗೆ ರಾಜಕೀಯ ಬಣ್ಣ ಬೇಡ ಎಂದಿದ್ದಾರೆ.
ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಟ, ನಿರ್ದೇಶಕ ರಿಷಬ್ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಭೇಟಿ ಮಾಡಿದ್ದರು. ಈ ಭೇಟಿ ಬೆನ್ನಲ್ಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಅನೀರಿಕ್ಷಿತ ಭೇಟಿ ಇದಾಗಿದೆ ಅಂದರು, ಬಳಿಕ , ನಮ್ಮ ಸಿದ್ದಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಈ ಹಿಂದೆ ಕೂಡ ರಿಷಬ್ ನಮ್ಮ ಸಿದ್ದಾಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ರಿಷಬ್ ಶೆಟ್ಟಿಯ ವಿಚಾರಗಳು ಹಾಗೆ ಇದೆ. ಅದನ್ನು ಆಗಾಗ ಅವರು ಪ್ರಕಟಣೆ ಮಾಡಿದ್ದಾರೆ ಎಂದರು.

ಇದು ರಿಷಬ್ ಶೆಟ್ಟಿ ಬಿಜೆಪಿ ಪರ ಇದ್ದಾರೆ ಎಂಬ ಮಾತು ಕೇಳಿ ಬಂದ ಹಿನ್ನಲೆ ಇದೀಹ ರಿಷಬ್ ಶೆಟ್ಟಿ ಸ್ಪಷ್ಟನೆ ಕೊಟ್ಟಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, ಕೊಲ್ಲೂರು ಮುಕಾಂಬಿಕೆ ದರ್ಶನಕ್ಕೆ ಹೋದಾಗ ಮಾನ್ಯ ಮುಖ್ಯಮಂತ್ರಿಗಳ ಭೇಟಿ ಆಯಿತು. ರಾಜಕೀಯದ ಬಣ್ಣ ಬೇಡ. ಕಾಂತಾರದ ಬರವಣಿಗೆಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದೇನೆ. ನಿಮ್ಮೆಲ್ಲರ ಪ್ರೀತಿ ಆಶೀರ್ವಾದವಿರಲಿ’ ಎಂದು ಬರೆದಿದ್ದಾರೆ.