LATEST NEWS
ಬಂಪರ್ ಹೊಡೆದ ಗಂಗೊಳ್ಳಿಯ ಮೀನುಗಾರರು
ಬಂಪರ್ ಹೊಡೆದ ಗಂಗೊಳ್ಳಿಯ ಮೀನುಗಾರರು
ಉಡುಪಿ ಜೂನ್ 7: ಕರಾವಳಿ ಕಡಲ ತೀರ ಕಳೆದ ಒಂದು ವಾರದಿಂದ ಪ್ರಕ್ಷುಬ್ದಗೊಂಡಿತ್ತು. ಈ ಹಿನ್ನಲೆಯಲ್ಲಿ ಕಡಲು ಪ್ರಕ್ಷುಬ್ದಗೊಂಡ ಸಂದರ್ಭದಲ್ಲಿ ಸಾಕಷ್ಟು ಮೀನುಗಳು ತೆರೆಯ ಜೊತೆ ದಡಕ್ಕೆ ಬರುತ್ತದೆ. ಅಂತಹದೇ ಸನ್ನಿವೇಶ ಕುಂದಾಪುರ ತಾಲೂಕಿನ ಗಂಗೊಳ್ಳಿಯ ಮಡಿಕಲ್ ಬೀಚ್ ನಲ್ಲಿ ಉಂಟಾಗಿದೆ.
ಗಂಗೊಳ್ಳಿಯ ಮಡಿಕಲ್ ಬೀಚ್ ನಲ್ಲಿ ಬಲೆ ಬೀಸಿರುವ ಮೀನುಗಾರರಿಗೆ ದೊಡ್ಡ ದೊಡ್ಡ ರೇವ್ ಫಿಶ್ ಗಳು ಸಿಕ್ಕಿದ್ದು ಒಂದೊಂದು ಮೀನುಗಳು 30-40 ಕಿಲೋ ಭಾರವಿದೆ. ಕಬ್ಬಿಣದ ಸಲಾಕೆಗಳನ್ನು ಉಪಯೋಗಿಸಿ ಮೀನನ್ನು ದಡಕ್ಕೆ ತರಲಾಗಿದೆ.
ರೇವ್ ಫಿಶ್ ಗೆ ಸ್ಥಳೀಯವಾಗಿ ತೊರಕೆ ಅನ್ನುವ ಹೆಸರಿದೆ. ಚಪ್ಪಟೆಯಾಗಿರುವ ಈ ಮೀನುಗಳಿಗೆ ಬಾಲವಿರುತ್ತದೆ. ಇವುಗಳು ಮೊಟ್ಟೆಯಿಡಲು ದಡದ ಕಡೆ ಬರುತ್ತದೆ. ಚೂಪಾದ ಮುಳ್ಳುಗಳನ್ನು ಹೊಂದಿರುವ ಈ ಮೀನು ಮನುಷ್ಯ ಅದರ ಮೇಲೆ ಕಾಲಿಟ್ಟರೆ ಕಾಲನ್ನು ತಿವಿಯುತ್ತದೆ. ಹೀಗಾಗಿ ಇದನ್ನು ಡೇಂಜರ್ ಫಿಶ್ ಅಂತ ಮೀನುಗಾರರು ಕರೆಯುತ್ತಾರೆ.
ಮಳೆಗಾಲ ಆರಂಭದಲ್ಲಿ ಈ ಮೀನುಗಳು ದಡದತ್ತ ಬರುತ್ತದೆ ಎಂದು ಮೀನುಗಾರರು ಹೇಳುತ್ತಾರೆ. ಮೀನಿನಲ್ಲಿರುವ ಮುಳ್ಳು ವಿಷಕಾರಿ. ಅದರಲ್ಲಿ ನಂಜಿನ ಅಂಶ ಬಹಳ ಇರುತ್ತದೆ. ಆ ಮುಳ್ಳು ಚುಚ್ಚಿದರೆ ಬಹಳ ರಕ್ತಸ್ರಾವ ಆಗುತ್ತದೆ. 24 ಗಂಟೆಗಳ ಕಾಲ ಅದರ ಉರಿ ಇರುತ್ತದೆ ಎಂದು ಹೇಳುತ್ತಾರೆ.