LATEST NEWS
ಮೊಬೈಲ್ ಕಳ್ಳರಿಗೆ ಶಾಕ್ ಕೊಟ್ಟ ಹೊಸ ತಂತ್ರಜ್ಞಾನ – ಯಾವ ಮೂಲೆಯಲ್ಲಿ ಬಚ್ಚಿಟ್ಟರೂ ಸಿಗುತ್ತೆ ಮೊಬೈಲ್….!!
ಮಂಗಳೂರು ಮಾರ್ಚ್ 17: ಕಳೆದು ಹೋದ ಅಥವಾ ಕಳ್ಳತನವಾಗ ಮೊಬೈಲ್ ಗಳನ್ನು ಮರಳಿ ಅದರ ವಾರಸುದಾರರಿಗೆ ತಲುಪಿಸುವಲ್ಲಿ ಮಂಗಳೂರು ಪೊಲೀಸರು ಮುಂಚೂಣಿಯಲ್ಲಿದ್ದಾರೆ. ನೂತನ ಪೊಲೀಸ್ ಆಯುಕ್ತರ ಆಗಮನದ ಬೆನ್ನಲ್ಲೇ ಚುರುಕಾದ ಮಂಗಳೂರು ಪೊಲೀಸರು ಇದೀಗ 39ಕ್ಕೂ ಅಧಿಕ ಜನರ ಮೊಬೈಲ್ ಗಳನ್ನು ಕಂಡು ಹಿಡಿದಿದ್ದಾರೆ.
ಮೊಬೈನ್ ಫೋನ್ಗಳ ಕಳವು ಅಥವಾ ಮಿಸ್ಸಿಂಗ್ ಸಂದರ್ಭದಲ್ಲಿ ಅದನ್ನು ಮತ್ತೆ ಪಡೆಯಲು ಜನರು ಸಾಕಷ್ಟು ಕಷ್ಟ ಪಡುತ್ತಾರೆ. ಇದೀಗ, ಸಿಐಇಆರ್ ಪೋರ್ಟಲ್‌ನಲ್ಲಿ ಕಳೆದುಹೋದ ಫೋನ್ಗಳನ್ನು ಮರಳಿ ಪಡೆಯಲು ಸುಲಭ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದರ ಅನುಕೂಲ ಪಡೆದುಕೊಂಡ 34 ಮಂದಿ ಮಂಗಳೂರಿನಲ್ಲಿ ತಮ್ಮ ಮೊಬೈಲ್ ಮರಳಿ ಪಡೆದುಕೊಂಡರು.
ಕಳೆದ ಐದು ತಿಂಗಳಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 402 ಮೊಬೈಲ್ ಫೋನ್ ಕಳವು ಮತ್ತು ಬಿದ್ದು ಹೋದ ಬಗ್ಗೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದ್ದವು. ಈ ಬಗ್ಗೆ ಮೊಬೈಲ್ ಕುರಿತ ಐಎಂಇಐ ಮಾಹಿತಿಗಳನ್ನು ಕೇಂದ್ರ ಸರಕಾರದ ಸೆಂಟ್ರಲ್ ಎಕ್ವಿಪ್ ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್ ) ಎನ್ನುವ ಹೊಸ ಏಪ್ ಆಧರಿತ ಪೋರ್ಟಲ್ ನಲ್ಲಿ ತುಂಬಲಾಗಿತ್ತು. ಈ ಪೈಕಿ 124 ಮೊಬೈಲ್ ಗಳು ಟ್ರೇಸ್ ಆಗಿದ್ದು, ಅದರಲ್ಲಿ 39 ಮೊಬೈಲ್ ಗಳನ್ನು ಅದರ ವಾರಿಸುದಾರರಿಗೆ ನೀಡಲಾಗಿದೆ. ಈ ಮೊಬೈಲ್ ಗಳ ಬೆಲೆ ಆರರಿಂದ ಏಳು ಲಕ್ಷ ಆಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಗುರುವಾರ ಸಂಜೆ 34 ಮಂದಿಯನ್ನು ಕರೆದು ಅವರ ಮೊಬೈಲ್ ಗಳನ್ನು ಹಿಂತಿರುಗಿಸಿದ್ದಾರೆ. ಅಲ್ಲದೆ, ಈ ಏಪ್ ಕಾರ್ಯ ನಿರ್ವಹಣೆ ಮತ್ತು ಅದಕ್ಕೆ ಸಾರ್ವಜನಿಕರೇ ನೇರವಾಗಿ ದೂರು ಸಲ್ಲಿಕೆ ಮಾಡಬಹುದು ಎನ್ನುವ ಬಗ್ಗೆಯೂ ವಿವರಣೆ ನೀಡಿದ್ದಾರೆ
ಸಿಐಇಆರ್ ಪೋರ್ಟಲ್‌ನಲ್ಲಿ ಸಂಪೂರ್ಣ ಮಾಹಿತಿ ದಾಖಲಿಸಿದರೆ ಪೊಲೀಸರು ಅದರ ಜಾಡು ಹಿಡಿದು ಮೊಬೈಲ್ ಫೋನ್ಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಕಳೆದುಹೋದ ಫೋನ್ಗಳು ದುರುಪಯೋಗವಾಗದಂತೆ ಅವುಗಳನ್ನು ಅನ್ಬ್ಲಾಕ್ ಮಾಡಲು ಸಿಇಐಆರ್ ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಮೂಲಕ ಮೊಬೈಲ್ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಸ್ವತಃ ತಾವೇ ಕೆಎಸ್ ಆ್ಯಪ್ನಲ್ಲಿ ದೂರು ಸಲ್ಲಿಸಬಹುದು. ಬಳಿಕ (www.ceir.gov.in) ಪೋರ್ಟಲ್‌ನಲ್ಲಿ ಕಳೆದು ಹೋಗಿರುವ ಮೊಬೈಲ್ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೇ ಬ್ಲಾಕ್ ರಿಕ್ವೆಸ್ಟ್ ಅನ್ನು ನೇರವಾಗಿ ಸಲ್ಲಿಸಬಹುದು. ಅಲ್ಲದೇ, ಸ್ಥಳೀಯ ಪೊಲೀಸ್ ಠಾಣೆಗಳಲ್ಲೂ ಬ್ಲಾಕ್ ರಿಕ್ವೆಸ್ಟ್ಗೆ ದೂರು ನೀಡಬಹುದು. ಪೊಲೀಸ್ ಕಮಿಷನರ್ ಅವರು ಸುಮಾರು 6 ರಿಂದ 7 ಲಕ್ಷ ರೂ. ಮೌಲ್ಯದ 30 ಫೋನ್ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ, ಇನ್ನೂ ಸುಮಾರು 20 ಲಕ್ಷ ರೂ. ಮೌಲ್ಯದ ಮೊಬೈಲ್ ಫೋನ್ಗಳು ಹಸ್ತಾಂತರಕ್ಕೆ ಬಾಕಿಯಿದೆ ಎಂದು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆಯಲ್ಲಿರುವ ಮಹಿಳೆ, ವೈದ್ಯೆ ಸೇರಿದಂತೆ 30 ಮಂದಿ ಕಳೆದು ಹೋದ ತಮ್ಮ ಮೊಬೈಲ್ ಫೋನ್ ಪಡೆದುಕೊಂಡರು.