LATEST NEWS
ಅಕ್ರಮ ಮರಳುಗಾರಿಕೆ ಅವ್ಯವಹಾರದಲ್ಲಿ ಸಸಿಕಾಂತ್ ಸೆಂಥಿಲ್ ಭಾಗಿ – ದಾಖಲೆ ಸಮೇತ ಭ್ರಷ್ಟಚಾರದ ಆರೋಪ
ಅಕ್ರಮ ಮರಳುಗಾರಿಕೆ ಅವ್ಯವಹಾರದಲ್ಲಿ ಸಸಿಕಾಂತ್ ಸೆಂಥಿಲ್ ಭಾಗಿ – ದಾಖಲೆ ಸಮೇತ ಭ್ರಷ್ಟಚಾರದ ಆರೋಪ
ಮಂಗಳೂರು ಸೆಪ್ಟೆಂಬರ್ 8: IAS ಹುದ್ದೆಗೆ ರಾಜೀನಾಮೆ ನೀಡಿದ ಸಸಿಕಾಂತ್ ಸೆಂಥಿಲ್ ವಿರುದ್ದ ಭಾರೀ ಭೃಷ್ಟಾಚಾರದ ಆರೋಪ ಕೇಳಿ ಬಂದಿದೆ.
ದಕ್ಷಿಣ ಕನ್ನಡ ಲಾರಿ ಮಾಲೀಕರ ಸಂಘದ ಒಕ್ಕೂಟ ಸೆಂಥಿಲ್ ವಿರುದ್ಧ ದಾಖಲೆ ಸಮೇತ ಭೃಷ್ಟಾಚಾರದ ಆರೋಪ ಮಾಡಿದ್ದಾರೆ. ಸ್ಯಾಂಡ್ ಬಝಾರ್ ಆ್ಯಪ್ ಮೂಲಕ ಅವ್ಯವಹಾರ ನಡೆಸಿದ್ದು, ಒಂದೇ ಕಂಪೆನಿಗೆ ಹಲವು ಕಡೆ ಮರಳು ತೆಗೆಯಲು ಒಪ್ಪಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ತುಂಬೆ ಡ್ಯಾಂನಲ್ಲಿ ಡ್ರೆಜ್ಜಿಂಗ್ ಮಾಡಲು ದಿಲ್ಲಿಯ ಕಂಪೆನಿಗೆ ಗುತ್ತಿಗೆ ನೀಡಲಾಗಿದ್ದು,ಇದರಲ್ಲಿ ಯಾವುದೇ ಮಾನದಂಡವನ್ನು ಪಾಲಿಸಿಲ್ಲ. ಹಳೆಯಂಗಡಿಯಲ್ಲಿ ಸೀಝ್ ಆದ ಮರಳನ್ನು ಕಾನೂನು ಬಾಹಿರವಾಗಿ ವಿಲೇವಾರಿ ಹತ್ತು ಸಾವಿರ ಮೆಟ್ರಿಕ್ ಟನ್ ಮರಳಿನ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಅಂತಾ ಆರೋಪಿಸಲಾಗಿದೆ.
ಮರಳುಗಾರಿಕೆ ಸಮಸ್ಯೆಯನ್ನು ಸರಿಪಡಿಸಲು ಜಾರಿಗೆ ತಂದ ಸ್ಯಾಂಡ್ ಬಝಾರ್ ಆ್ಯಪ್ ಮೂಲಕವು ನಿರ್ಗಮಿತ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವ್ಯವಹಾರ ನಡೆಸಿದ್ದಾರೆ ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ಆರೋಪಿಸಿದೆ.
ಮರಳು ತೆಗೆಯಲು ಒಂದೇ ಪರ್ಮಿಟ್ ಗೆ ಹಲವು ಕಡೆ ಒಪ್ಪಿಗೆ ನೀಡಲಾಗಿದ್ದು, ತುಂಬೆ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಡ್ರೆಜ್ಜಿಂಗ್ ನಲ್ಲೂ ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದಿಲ್ಲಿ ಕಂಪೆನಿಗೆ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಡ್ರೆಜ್ಜಿಂಗ್ ಮಾಡಲು ಟೆಂಡರ್ ನೀಡಿದ್ದು, ಟೆಂಡರ್ ನೀಡುವ ಸಂದರ್ಭ ಯಾವುದೇ ಮಾನದಂಡ ಅನುಸರಿಸದೇ ಟೆಂಡರ್ ನಿಯಮ ಮುರಿದು ಕೊಟ್ಟಿದ್ದು ಅಲ್ಲದೆ ಈ ಬಗ್ಗೆ ಹೈ ಕೋರ್ಟ್ ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕಿಂಡಿ ಅಣೆಕಟ್ಟು ಪ್ರದೇಶದಲ್ಲಿ ಮರಳು ತೆಗೆಯೋದನ್ನು ಹೂಳೆತ್ತುದಾಗಿ ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ.ಈ ಕುರಿತಂತೆ ತನಿಖೆ ನಡೆಯಬೇಕು ಎಂದು ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ಆಗ್ರಹಿಸಿದೆ.
ಮರಳು ಲಾರಿಗಳಿಗೆ GPS ಅಳವಡಿಸಲು ಟೆಂಡರ್ ಕರೆದಿದ್ದಾರೆ. ಆದರೆ ಉಡುಪಿ ಜಿಲ್ಲೆಯಲ್ಲಿ ಬ್ಲಾಕ್ ಲೀಸ್ಟ್ ನಲ್ಲಿರುವ T4U ಎಂಬ ಕಂಪೆನಿಗೆ ಟೆಂಡರ್ ಕೊಟ್ಟಿದ್ದಾರೆ. ಅಲ್ಲದೆ ಸರಕಾರಿ ಅಧಿಕಾರಿಗಳಿಂದ ಸೀಝ್ ಆದ ಮರಳನ್ನು ಓಷಿಯನ್ ಟೆಕ್ಕಿ ಎಂಬ ಕಂಪೆನಿಗೆ ಕೊಟ್ಟಿದ್ದಾರೆ ಈ ಹಿನ್ನಲೆಯಲ್ಲಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ವಿರುದ್ದ ಲೋಕಾಯುಕ್ತ ಕ್ಕೆ ದೂರು ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಲಾರಿ ಮಾಲಿಕರ ಸಂಘಗಳ ಒಕ್ಕೂಟ ತಿಳಿಸಿದೆ.