DAKSHINA KANNADA
ಖ್ಯಾತ ಹಿಂದೂಸ್ಥಾನಿ ಗಾಯಕ ಪಂಡಿತ್ M .ವೆಂಕಟೇಶ್ ಕುಮಾರ್ ಗೆ 2024ನೇ ಸಾಲಿನ ‘ಆಳ್ವಾಸ್ ವಿರಾಸತ್’ ಪ್ರಶಸ್ತಿ ಗೌರವ
ಮಂಗಳೂರು : ಖ್ಯಾತ ಹಿಂದೂಸ್ಥಾನಿ ಗಾಯಕ ಸ್ವರ ಸಾಮ್ರಾಟ್ ಪಂಡಿತ್ M .ವೆಂಕಟೇಶ್ ಕುಮಾರ್ ಅವರು 2024ನೇ ಸಾಲಿನ ‘ಆಳ್ವಾಸ್ ವಿರಾಸತ್’ ಪ್ರಶಸ್ತಿಗೆ (Alvas Virasat) ಆಯ್ಕೆಯಾಗಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರು ಈ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 10 ರಿಂದ 16ರವರೆಗೆ ಮೂಡುಬಿದಿರೆಯಲ್ಲಿ ನಾಡು ನುಡಿಯ ರಾಷ್ಟ್ರೀಯ ಸಾಂಸ್ಕೃತಿಕ ವೈಭವ ಅಳ್ವಾಸ್ ವಿರಾಸತ್ ಕಾರ್ಯಕ್ರಮವು ನಡೆಯಲಿದ್ದು ಈ ಕಾರ್ಯಕ್ರಮದಲ್ಲಿ ಈ ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳ್ಳಾರಿಯ ಲಕ್ಷ್ಮೀಪುರದಲ್ಲಿ ಜನಿಸಿದ ವೆಂಕಟೇಶ್ ಕುಮಾರ್ ಅವರಿಗೆ ಜಾನಪದ ಗಾಯಕರಾಗಿದ್ದ ತಂದೆ ಹುಲೆಗಪ್ಪ ಅವರೇ ಮೊದಲ ಗುರು, ಬಳಿಕ ಪುಟ್ಟರಾಜ ಗವಾಯಿಗಳಿಂದ ಗ್ವಾಲಿಯರ್ ಮತ್ತು ಕಿರಾಣಾ ಘರಾಣ ಶೈಲಿಯ ಗಾಯನವನ್ನು ಅಭ್ಯಾಸ ಮಾಡಿದರು. ಮಧುರ ಧ್ವನಿಯ ಗಾಯಕರಾದ ಇವರು ಸಾಂಪ್ರದಾಯಿಕ ಮತ್ತು ಭಕ್ತಿ ಸಂಗೀತ ಕ್ಷೇತ್ರದ ಅದ್ವಿತೀಯ ಪ್ರತಿಭೆಯಾಗಿದ್ದಾರೆ. ದೇಶ- ವಿದೇಶಗಳಲ್ಲಿ ಸಂಗೀತ ಕಛೇರಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ.