LATEST NEWS
13 ಅಂಕೆಗಳುಳ್ಳ ಮೊಬೈಲ್ ನಂಬರ್ ಸುದ್ದಿ ಸುಳ್ಳು – ದೂರ ಸಂಪರ್ಕ ಇಲಾಖೆ
13 ಅಂಕೆಗಳುಳ್ಳ ಮೊಬೈಲ್ ನಂಬರ್ ಸುದ್ದಿ ಸುಳ್ಳು – ದೂರ ಸಂಪರ್ಕ ಇಲಾಖೆ
ನವದೆಹಲಿ ಫೆಬ್ರವರಿ 21: ಕೇಂದ್ರ ಸರಕಾರ ಮೊಬೈಲ್ ಬಳಕೆದಾರರಿಗೆ 10 ಅಂಕೆಗಳ ಮೊಬೈಲ್ ನಂಬರ ಬದಲು 13 ಅಂಕೆಗಳ ಮೊಬೈಲ್ ನಂಬರ್ ನ್ನು ಜಾರಿಗೆ ತರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ವೆಬ್ ಸೈಟ್ ಗಳಲ್ಲಿ ಹರಿದಾಡುತ್ತಿದ್ದು, ಈ ಸುದ್ದಿಯನ್ನು ದೂರ ಸಂಪರ್ಕ ಇಲಾಖೆ ಅಲ್ಲಗಳೆದಿದೆ.
ಇದ್ದೊಂದು ಸುಳ್ಳು ಸುದ್ದಿಯಾಗಿದ್ದು ದೂರ ಸಂಪರ್ಕ ಇಲಾಖೆ ಯಾವುದೇ ರೀತಿಯಲ್ಲಿ ಮೊಬೈಲ್ ನಂಬರ್ ನ್ನು 10 ಡಿಜಿಟ್ ಗಳಿಂದ 13 ಡಿಜಿಟ್ ಗೆ ಬದಲಾಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾಮಾಜಿಕ ಜಾಲತಾಣ ಹಾಗೂ ವೆಬ್ ಸೈಟ್ ಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಹೇಳಿದೆ.
ಆದರೆ ಸಿಮ್ ಆಧಾರಿತ M2M ಸಾಧನಗಳಿಗೆ 13 ಅಂಕಿಯ ಮೊಬೈಲ್ ಸಂಖ್ಯೆಗಳನ್ನು ನೀಡಲು ದೂರ ಸಂಪರ್ಕ ಇಲಾಖೆ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಆದೇಶ ನೀಡಿದೆ.ಅಲ್ಲದೆ 10 ಅಂಕೆಯ ಮೊಬೈಲ್ ಸಂಖ್ಯೆಗಳ ಸಾಧನಗಳು ಕೂಡ ಅಸ್ತಿತ್ವದಲ್ಲಿರುತ್ತದೆ ಎಂದು ತಿಳಿಸಿದೆ. ಅಲ್ಲದೆ ಸಾಮಾನ್ಯ ಮೊಬೈಲ್ ಸಂಖ್ಯೆ 13 ಅಂಕೆಗಳಾಗುವ ಬದಲಾಗುವ ಸುದ್ದಿಯನ್ನು ನಿರಾಕರಿಸಿದೆ.
ದೇಶದ ಟೆಲಿಕಾಂ ಸೇವಾ ಪೂರೈಕೆದಾರರು ಇಲ್ಲಿಯವರೆಗೆ ತಮ್ಮ ಮೊಬೈಲ್ ಸಿಮ್ ಆಧಾರಿದ M2M ಸಾಧನಗಳಿಗೆ 10 ಅಂಕೆಯ ಸಂಖ್ಯೆಗಳನ್ನು ನೀಡುತ್ತಿದ್ದರು.