Connect with us

LATEST NEWS

11 ಗಂಟೆ ಹೊತ್ತಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಾಖಲೆಯ ಶೇಕಡ 40 ಮತದಾನ

11 ಗಂಟೆ ಹೊತ್ತಿಗೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ದಾಖಲೆಯ ಶೇಕಡ 40 ಮತದಾನ

ಮಂಗಳೂರು ಮೇ 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ಳಂ ಬೆಳ್ಳಿಗ್ಗೆ ಮಹಾ ಮತದಾನ ಉತ್ಸವಕ್ಕೆ ಚಾಲನೆ ದೊರಕಿದೆ. ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳ 1858 ಮತಗಟ್ಟೆಗಳಲ್ಲಿ ಮತದಾನ ಆರಂಭಗೊಂಡಿದ್ದು ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಅಖಾಡದಲ್ಲಿರುವ ಘಟಾನುಘಟಿ 58 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

ಜಿಲ್ಲೆಯಲ್ಲಿ ಒಟ್ಟು 17,11,878 ಮತದಾರರಿದ್ದಾರೆ. ಅವರಲ್ಲಿ 8,41,073 ಪುರುಷ ಹಾಗು 8,70,675 ಮಹಿಳಾ ಮತದಾರರು . ಇದಲ್ಲದೇ ಜಿಲ್ಲೆಯಲ್ಲಿ ಈ ಬಾರಿ 100 ಮಂದಿ ಲೈಂಗಿಕ ಅಲ್ಪ ಸಂಖ್ಯಾತರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮುಂಜಾನೆಯಿಂದಲೇ ಮತಗಟ್ಟೆಗಳ ಎದುರು ಜನರ ಸಾಲು ಕಂಡುಬರುತ್ತಿದೆ. ಹೊತ್ತು ಏರುತ್ತಿದ್ದಂತೆ ಕರಾವಳಿಯಲ್ಲಿ ಬಿಸಿಲ ಝಳ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾನೆಯೇ ಮತದಾನಕ್ಕೆ ಜನರು ಮುಂದಾಗುತ್ತಿದ್ದಾರೆ. ಮಂಗಳೂರಿನ ಎಲ್ಲಾ ಮತಗಟ್ಟೆಗಳಲ್ಲಿ ಜನರು ಸರತಿ ಸಾಲು ಸಾಮಾನ್ಯವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ 243 ಮತಗಟ್ಟೆಗಳಿದ್ದು 2,18,880 ಮತದಾರರಿದ್ದಾರೆ. ಮೂಡಬಿದ್ರಿ ಕ್ಷೇತ್ರದಲ್ಲಿ 221 ಮತಗಟ್ಟೆಗಳಿದ್ದು 2,00045 ಮತದಾರರಿದ್ದಾರೆ.

ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ 245‌ ಮತಗಟ್ಟೆ ಗಳಿದ್ದು 2,34,826 ಮತದಾರರಿದ್ದಾರೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 238 ಮತಗಟ್ಟೆಗಳಲ್ಲಿ 2,40,057 ಮತದಾರರು ಮತ ಚಲಾಯಿಸಲಿದ್ದಾರೆ.

ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 210 ಮತಗಟ್ಟೆಗಳಿದ್ದು 1,95,735 ಮತದಾರರಿದ್ದು, ಬಂಟ್ವಾಳ ಕ್ಷೇತ್ರದಲ್ಲಿ 249 ಮತಗಟ್ಟೆಗಳಿವೆ ಅವರಲ್ಲಿಮತದಾರರು 2,21,735 ಇಂದು ಮತಚಲಾಯಿಸಲಿದ್ದಾರೆ.

ಪುತ್ತೂರು ವಿಧಾನ ಸಭಾ ಕ್ಷೆತ್ರದಲ್ಲಿ 223 ಮತಗಟ್ಟೆ ಗಳಿದ್ದು 2,01,884 ಮತದಾರರಿದ್ದಾರೆ.
ಸುಳ್ಯ ಕ್ಷೇತ್ರ ದಲ್ಲಿ229 ಮತಗಟ್ಟೆ ಗಳಲ್ಲಿ 1,98, 686 ಮತದಾರರು ಇಂದು ಮತಚಲಾಯಿಸಲಿದ್ದಾರೆ.

ಜಿಲ್ಲೆಯ 1858 ಮತಗಟ್ಟೆ ಗಳಲ್ಲಿ 7569 ಮತ ಯಂತ್ರ ಒದಗಿಸಲಾಗಿದ್ದು ಇವುಗಳ ಪೈಕಿ ಶೇಕಡಾ 20 ರಷ್ಟು ಮತಯಂತ್ರಗಳು ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ಒಟ್ಟು 13176 ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬ ಅಧ್ಯಕ್ಷಧಿಕಾರಿ , 4 ಮತಗಟ್ಟೆ ಅಧಿಕಾರಿ ಮತ್ತು ಒಬ್ಬ ಡಿ ವರ್ಗ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1858 ಮತಗಟ್ಟೆಗಳ ಪೈಕಿ 517 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಈ ಪೈಕಿ 97 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ,221 ಮತಗಟ್ಟೆಗಳಲ್ಲಿ ಮೈಕ್ರೋ ವಿಕ್ಷಕರನ್ನು ಚುನಾವಣಾ ಆಯೋಗ ನಿಯೋಜಿಸಿದೆ.

ಮುಕ್ತ ಹಾಗು ಶಾಂತಿಯುತ ಮತದಾನ ಪ್ರಕ್ರಿಯೆ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ ನಡೆಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸಿ ಆರ್ ಪಿ ಸಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಮಾಡಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *