Connect with us

LATEST NEWS

10 ವರ್ಷಗಳ ಹಿಂದೆ ಉಡುಪಿ ಜಿಲ್ಲೆಗೆ ಆಗಮಿಸಿದ್ದ ರತನ್ ಟಾಟಾ – ವಿಡಿಯೋ ವೈರಲ್

ಉಡುಪಿ ಅಕ್ಟೋಬರ್ 10: ಉದ್ಯಮಿ ರತನ್‌ ಟಾಟಾ ಅವರು ಇಲ್ಲಿನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಉಪ್ಪಿನಿಂದ ಉಕ್ಕಿನವರೆಗೆ, ಏರ್‌ಪಿನ್‌ನಿಂದ ಏರೋಪ್ಲೇನ್‌ವರೆಗೆ ಟಾಟಾ ಮುಟ್ಟದೇ ಇರುವ ಕ್ಷೇತ್ರವಿಲ್ಲ. ಹಾಗೆಯೇ ತಾವು ಕೈಇಟ್ಟ ಕ್ಷೇತ್ರದಲ್ಲಿ ಕಾಪಾಡಿಕೊಂಡ ನೈತಿಕತೆ, ವಿಶ್ವಾಸಾರ್ಹತೆಯಿಂದಲೇ ‘ಟಾಟಾ’ ಬ್ರಾಂಡ್‌ ಆಗಿ ಟಾಟಾ ಸಮೂಹ ತನ್ನ ಛಾಪು ಮೂಡಿಸಿದೆ. ರತನ್ ಟಾಟಾ ಅವರ ದೂರದೃಷ್ಟಿ ಮತ್ತು ಕನಸುಗಳಿಂದ ಟಾಟಾ ಸಮೂಹ ಬಹುರಾಷ್ಟ್ರೀಯ ಕಂಪನಿಯಾಗಿ ಜಾಗತಿಕ ಮಟ್ಟದಲ್ಲೂ ಸಾಮ್ರಾಜ್ಯ ವಿಸ್ತರಿಸಿದೆ.


ಈ ನಡುವೆ ರತನ್ ಟಾಟಾ ಅವರು ಹತ್ತು ವರ್ಷಗಳ ಹಿಂದೆ ಉಡುಪಿಗೆ ಆಗಮಿಸಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.


ಹಿರಿಯಡ್ಕದಲ್ಲಿರುವ ಪುತ್ತಿಗೆ ಮೂಲ ಮಠಕ್ಕೆಆಗಮಿಸಿದ ರತನ್‌ ಟಾಟಾ ಸ್ವಾಗತ ಗೋಪುರವನ್ನು ಲೋಕಾರ್ಪಣೆ ಮಾಡಿದ್ದರು. ಗ್ರಾಮೀಣ ಪರಿಸರದ ಮಠದಲ್ಲಿ ಅಮೂಲ್ಯ ಸಮಯವನ್ನು ಕಳೆದ ಅವರು ಮಠಕ್ಕೆ ಆಗಮಿಸಿ, ದೇವರ ದರ್ಶನ ಪಡೆದಿದ್ದರು.


ಪುತ್ತಿಗೆ ಮಠಕ್ಕೆ ಬಂದಿದ್ದ ರತನ್ ಟಾಟಾ ಕರಾವಳಿಯ ಕಲೆ ಸಂಸ್ಕೃತಿ ಆಚರಣೆಗಳ ಬಗ್ಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ಮಾಹಿತಿಗಳನ್ನು ಪಡೆದಿದ್ದರು. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅಷ್ಟಮಠಾಧೀಶರು ಎರಡು ವರ್ಷಗಳ ಕಾಲ ಸರತಿಯಲ್ಲಿ ಪೂಜೆಗೈವ ಪರ್ಯಾಯ ಮಹೋತ್ಸವದ ಬಗ್ಗೆ ಮಾಹಿತಿಯನ್ನು ಬಹಳ ಆಸಕ್ತಿಯಿಂದ ತಿಳಿದುಕೊಂಡಿದ್ದರು. ಪುತ್ತಿಗೆ ಮೂಲ ಮಠದಲ್ಲಿ ರತನ್ ಟಾಟಾವರಿಗೆ ಈ ಸಂದರ್ಭ ಪುರ ಗೌರವವನ್ನು ಸಲ್ಲಿಕೆ ಮಾಡಲಾಗಿತ್ತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *