Connect with us

    FILM

    ಕುತೂಹಲ ಮೂಡಿಸುತ್ತಿರುವ ‘ಕುಬೇರ’ನ ರಾಣಿ ರಶ್ಮಿಕಾ ಮಂದಣ್ಣಳ ಫಸ್ಟ್​ಲುಕ್​ ರಿಲೀಸ್..!

    ಹೈದರಾಬಾದ್​​: ಹ್ಯಾಪಿಡೇಸ್​​ ಸಿನಿಮಾ ಖ್ಯಾತಿಯ ನಿರ್ದೇಶಕ ಶೇಖರ್​​ ಕಮ್ಮುಲ ನಿರ್ದೇಶನದ ‘ಕುಬೇರ’ ಚಿತ್ರದಲ್ಲಿ ನಟಿಸುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ ರ ಫಸ್ಟ್ ಲುಕ್ ರಿಲೀಸ್ ಆಗಿದೆ.

    ಈ ಪ್ಯಾನ್-ಇಂಡಿಯಾ ಸಿನಿಮಾ ಕುಬೇರ ತಮಿಳು ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳುತ್ತಿದ್ದು ರಶ್ಮಿಕಾಳ ಜೊತೆ ಕಾಲಿವುಡ್​​ ಸ್ಟಾರ್​ ಹೀರೋ ಧನುಷ್​, ಟಾಲಿವುಡ್​​​ ನಟ ನಾಗಾರ್ಜುನ ಅಕ್ಕಿನೇನಿ ಮತ್ತಿತರ ನಟರು ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಪ್ರಸ್ತುತ​​ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಈ ಮಧ್ಯೆ ಚಿತ್ರತಂಡ ರಶ್ಮಿಕಾ ಮಂದಣ್ಣ ಅವರ ಫಸ್ಟ್​​ಲುಕ್​ ವೀಡಿಯೊವನ್ನು ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ ರಶ್ಮಿಕಾ ಕಾಡಿನ ಮಧ್ಯೆ ಮಣ್ಣನು ಅಗೆದು ಸೂಟ್ಕೇಸ್​ ಹೊರತೆಗೆಯುತ್ತಾರೆ. ಸೂಟ್ಕೇಸ್​ ತೆರೆದು ಅದರಲ್ಲಿ ಇರುವ ಹಣವನ್ನು ನೋಡಿ ಉತ್ಸುಕರಾಗಿ ಕಾಡಿನಿಂದ ಹೊರೆನಡೆಯುತ್ತಿರುವುದನ್ನು ನೋಡಬಹುದು.

    ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದರು ಪ್ರೇಕ್ಷಕರಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಸಿನಿಮಾದಲ್ಲಿ ರಶ್ಮಿಕಾ ಪಾತ್ರದ ಬಗ್ಗೆ ಕುತೂಹಲ ಮೂಡಿಸುವಂತೆ ಬಿಡುಗಡೆ ಮಾಡಿರುವ ವೀಡಿಯೊ ನೋಡಿ ಅಭಿಮಾನಿಗಳು ಆಕೆಯ ಪಾತ್ರ ಹೇಗಿರಲಿದೆ ಎಂದು ಆಲೋಚಿಸುತ್ತಿದ್ದಾರೆ. ಅಲ್ಲದೆ ವೀಡಿಯೊ ನೋಡಿ ನೆಟ್ಟಿಗರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಒಬ್ಬ ಅಭಿಮಾನಿ ಕುತೂಹಲಕಾರಿ, ಕಥೆ ಮತ್ತು ಅದರಲ್ಲಿ ನಿಮ್ಮ ಪಾತ್ರವನ್ನು ತಿಳಿಯಲು ಸಿನಿಮಾ ಬಿಡುಗಡೆಗಾಗಿ ನಿರೀಕ್ಷಿಸುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.
    ಕುಬೇರ ಸಿನಿಮಾಕ್ಕೆ ನಿಕೇತ್​ ಬೊಮ್ಮಿ ಛಾಯಾಗ್ರಹಣವಿದ್ದು, ದೇವಿಶ್ರೀ ಪ್ರಸಾದ್​ ಸಂಗೀತ ಸಂಯೋಜನೆ ಇದೆ. ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಬಿಡುಗಡೆ ದಿನಾಂಕವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕುಬೇರ ಮಾತ್ರವಲ್ಲದೆ ರಶ್ಮಿಕಾ ಮಂದಣ್ಣ ಕೂಡ ಪುಷ್ಪ 2, ಸಲ್ಮಾನ್​ಖಾನ್​ ಅಭಿನಯದ ಸಿಕಂದರ್​ ಸಿನಿಮಾದಲ್ಲಿ ಬಿಸಿ ಇದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply