FILM
ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಕನ್ನಡತಿ ರಶ್ಮಿಕಾ ಮಂದಣ್ಣ
ಬೆಂಗಳೂರು : ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಆಗಿ ಕನ್ನಡತಿ ರಶ್ಮಿಕಾ ಮಂದಣ್ಣ ಅವರನ್ನು ಗೂಗಲ್ ಇಂಡಿಯಾ ಆಯ್ಕೆ ಮಾಡಿದೆ. ಸದ್ಯ ಗೂಗಲ್ ನಲ್ಲಿ “ನ್ಯಾಷನಲ್ ಕ್ರಶ್ ಆಫ್ ಇಂಡಿಯಾ” ಎಂದು ಹುಡುಕಿದರೆ ನಿಮಗೆ ರಶ್ಮಿಕಾ ಮಂದಣ್ನ ಹೆಸರು ಕಾಣಸಿಗುತ್ತದೆ.
ಕನ್ನಡ, ತೆಲುಗು, ತಮಿಳಿನಲ್ಲಿ ಬೇಡಿಕೆಯಾಗಿರುವ ಈ ಸ್ಟಾರ್ ನಟಿ. ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಈ ಹಿಂದೆ ರಾತ್ರೋ ರಾತ್ರಿ ನ್ಯಾಷನಲ್ ಕ್ರಶ್ ಆಗಿದ್ದರೂ, ಆದರೆ, ಇದೀಗ ಕೊಡಗಿನ ಬೆಡಗಿ ಈ ಪಟ್ಟವನ್ನು ಪಡೆದಿದ್ದಾರೆ. ಗೂಗಲ್ನಲ್ಲಿ 2020ರ ನ್ಯಾಷನಲ್ ಕ್ರಶ್ ಎಂದು ಹುಡುಗಿದರೆ, ರಶ್ಮಿಕಾ ಮಂದಣ್ಣ ಹೆಸರು ಕಾಣಿಸಿಕೊಳ್ಳುತ್ತಿದೆ.
ಈ ಮೂಲಕ ರಶ್ಮಿಕಾ ಹವಾ ದೇಶದೆಲ್ಲೆಡೆ ಮೂಡಿದೆ. ಕಿರಿಕ್ ಪಾರ್ಟಿ ಮೂಲಕ ಕನ್ನಡದಲ್ಲಿ ಮಿಂಚಿದ್ದ ನಟಿ ತೆಲುಗಿನಲ್ಲಿ ಸ್ಟಾರ್ ಪಟ್ಟ ಪಡೆದರು. ತೆಲುಗಿನಲ್ಲಿ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ಬೇಡಿಕೆಯ ನಟಿಯಾಗಿದ್ದಾರೆ
ಹೌದು ಈ ಹಿಂದೆ ನ್ಯಾಷನಲ್ ಕ್ರಶ್ ಎನ್ನಿಸಿಕೊಂಡಿದ್ದ ಪ್ರಿಯಾ ವಾರಿಯರ್ ಹಾಗೂ ದಿಶಾ ಪಟಾನಿ ಅವರುಗಳನ್ನು ಹಿಂದಿಕ್ಕಿ ಕಿರಿಕ್ ಪಾರ್ಟಿ ಬೆಡಗಿ ರಶ್ಮಿಕಾ ಇದೀಗ “ನ್ಯಾಷನಲ್ ಕ್ರಶ್ ಆಫ್ ದಿ ಇಂಡಿಯಾ” ಎನಿಸಿದ್ದಾರೆ.
ರಶ್ಮಿಕಾ ಮಂದಣ್ನ ಅವರೀಗ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಅವರ “ಪುಷ್ಪ” ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದೆ. ಕನ್ನಡದಲ್ಲಿ ಧ್ರುವ ಸರ್ಜಾ ಅವರ ‘ಪೊಗರು’ ಚಿತ್ರದಲ್ಲಿ ಅಭಿನಯಿಸಿರುವ ನಟಿ ಚಿತ್ರದ ಬಿಡುಗಡೆ ಎದುರು ನೋಡುತ್ತಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿಯಾದರೂ ರಶ್ಮಿಕಾ ಇದುವರೆಗೆ ಒಂದೇ ಒಂದು ಹಿಂದಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂತಹಾ ನಟಿಯನ್ನು ನ್ಯಾಷನಲ್ ಕ್ರಶ್ ಆಫ್ ಇಂಡಿಯಾ ಎಂದು ಗುರುತಿಸುವುದು ನಿಜಕ್ಕೂ ವಿಶೇಷ ಎಂದು ನೆಟಿಜನ್‌ಗಳು ಪ್ರತಿಕ್ರಿಯಿಸುತ್ತಿದ್ದಾರೆ.