FILM
ನಿಮ್ಮ ದೇಹ ಪುರುಷರ ತರ ಇದೆ ಎಂಬ ಕಮೆಂಟ್ ಗೆ ಧನ್ಯವಾದ ಎಂದ ನಟಿ

ಮುಂಬೈ : ನಟಿ ತಾಪ್ಸಿ ಪನ್ನು ದೇಹ ಗಂಡಸರ ರೀತಿ ಇದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದು, ಅಭಿಮಾನಿಯ ಕಮೆಂಟ್ ನ್ನು ತಾಪ್ಸಿ ತುಂಬ ಪಾಸಿಟಿವ್ ಆಗಿ ಸ್ವೀಕರಿಸಿರುವುದು ವಿಶೇಷ. ನೀವು ಕಮೆಂಟ್ ಮಾಡಿದ ಈ ಸಾಲನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಮತ್ತು ಸೆಪ್ಟೆಂಬರ್ 23ರವರೆಗೂ ಕಾಯಿರಿ. ಮುಂಚಿತವಾಗಿ ನಿಮಗೆ ಧನ್ಯವಾದಗಳು. ಇಂಥ ಮಾತುಗಳನ್ನು ಕೇಳಲು ನಾನು ತುಂಬ ಶ್ರಮಪಟ್ಟಿದ್ದೇನೆ’ ಎಂದು ತಾಪ್ಸಿ ಟ್ವೀಟ್ ಮಾಡಿದ್ದಾರೆ.
ತಾಪ್ಸಿ ಪನ್ನು ‘ರಶ್ಮಿ ರಾಕೆಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಅಥ್ಲೆಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಾಕಷ್ಟು ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ. ಇನ್ನು ಈ ಚಿತ್ರಕ್ಕಾಗಿ ದೇಹ ದಂಡಿಸಿರುವ ಅವರು ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಆ ಫೋಟೋ ನೋಡಿ ಸಾಕಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ. ನೆಟ್ಟಿಗರೊಬ್ಬರು ತಾಪ್ಸಿ ಪನ್ನುಗೆ ‘ ತಾಪ್ಸಿ ಪನ್ನು ಮಾತ್ರ ಪುರುಷರ ತರ ದೇಹ ಇಟ್ಟುಕೊಳ್ಳಬಲ್ಲರು’ ಅಂತ ಕಾಮೆಂಟ್ ಮಾಡಿದ್ದರು.