KARNATAKA
ಬಿಗ್ ಬಾಸ್ ಮನೆ ರಾಜಕೀಯ ವಿಚಾರಿಸಲು ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ
ಬೆಂಗಳೂರು ಅಕ್ಟೋಬರ್ 24: ಕಲರ್ಸ್ ಕನ್ನಡದಲ್ಲಿ ನಡೆಯುತ್ತಿರುವ ಬಿಗ್ ಬಾಸ್ ಸೀಸನ್ 11 ಬರೀ ಗಲಾಟೆಯಲ್ಲಿ ಮುಂದುವರೆದಿದೆ. ಬಿಗ್ ಬಾಸ್ ನಲ್ಲಿ ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಹನುಮಂತು ಅವರು ಆಗಮಿಸಿದ್ದರು. ಇದೀಗ ಮತ್ತೊಬ್ಬರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಬಿಗ್ ಬಾಸ್ ನಲ್ಲಿ ಈ ವಾರ ಸ್ಪರ್ಧಿಗಳಿಗೆ ರಾಜಕೀಯದ ಟಾಸ್ಕ್ ನೀಡಿದ್ದಾರೆ. ಅದರಂತೆ ಎರಡು ಪಕ್ಷಗಳನ್ನು ರಚಿಸಿ ಕೆಲವು ಟಾಸ್ಕ್ ನೀಡಿದ್ದಾರೆ. ಈ ನಡುವೆ ಬಿಗ್ ಬಾಸ್ ನಲ್ಲಿ ನಡೆಯುತ್ತಿರುವ ರಾಜಕೀಯ ವಿಚಾರಿಸಿಕೊಳ್ಳಲು ಬಿಗ್ ಬಾಸ್ ನ್ಯೂಸ್ ಆ್ಯಂಕರ್ ರಾಧಾ ಹಿರೇಗೌಡರ್ ಅವರನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದೆ. ಬಿಗ್ ಬಾಸ್ ಮನೆಯ ರಾಜಕೀಯ ಆಟವನ್ನು ಪ್ರಶ್ನೆ ಮಾಡೋಕೆ ಬರ್ತಾ ಇದ್ದಾರೆ ರಾಧಾ ಹಿರೇಗೌಡರ್. ನೀವು ಬಂದಿದ್ದೀರಿ ಅಂದರೆ ನಮಗೆ ನೀರು ಕುಡಿಸುತ್ತೀರಿ. ನೀವು ಸ್ಪರ್ಧಿಯಾಗಿ ಬಂದಿದ್ದೀರೋ ಹೇಗೋ ಅಂಥ ಚೈತ್ರಾ ರಾಧಾ ಅವರನ್ನು ಪ್ರಶ್ನಿಸಿದ್ದಾರೆ.
ನನಗೆ ಪಕ್ಷ ಎಲ್ಲ ಹೊಸತಲ್ಲ. ಭಾಷಣ ರಾಜಕೀಯ. ಐಶ್ವರ್ಯಾ ಅವರೇ ಎದೆ ಮುಟ್ಟಿಕೊಂಡು ಹೇಳಿ ನಿಮ್ಮ ಪಕ್ಷದಲ್ಲಿ ಎಲ್ಲರೂ ಪ್ರಾಮಾಣಿಕರಾಗಿದ್ದಾರಾ? ಏನು ಕೊಡ್ತೀರಾ ಜನರಿಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ತಿವಿಕ್ರಮ್ ಕಾಫಿ ಕೊಡುತ್ತೇವೆ ಅಂದಿದ್ದಾರೆ. ಐಶ್ವರ್ಯಾ ಅವರು ಮನರಂಜನೆ ಕೊಡುತ್ತೇವೆ ಅಂದಿದ್ದಾರೆ. ಅದಕ್ಕೆ ರಾಧಾ ಅವರು ಅದನ್ನು ನಿವೇನು ಕೊಡೋದು ಬಿಗ್ ಬಾಸ್ ಕೊಡುತ್ತಾರೆ. ನನ್ನನ್ನು ನಗಿಸುತ್ತೀರಾ ನಗಿಸಿ ಎಂದು ಮರು ಪ್ರಶ್ನಿಸಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ. ರಾಧಾ ಹಿರೇಗೌಡರ್ ಸ್ಪರ್ಧಿಯಾಗಿ ಬಂದಿದ್ದಾರೋ ಅಥವಾ ಗೆಸ್ಟ್ ಆಗಿ ಬಂದಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa pic.twitter.com/9mFwNJztYe
— Colors Kannada (@ColorsKannada) October 24, 2024