Connect with us

    DAKSHINA KANNADA

    ಪುತ್ತೂರಿನಲ್ಲಿ ಅಪರೂಪದ ಬೆಕ್ಕು ಕಣ್ಣಿನ ಹಾವು ಪತ್ತೆ – ಉರಗತಜ್ಞ ತೇಜಸ್ ಬನ್ನೂರಿಂದ ರಕ್ಷಣೆ..!

    ಬೆಕ್ಕಿನ ಕಣ್ಣಿನ ಹಾವು ಎಂದು ಕರೆಯಲಾಗುತ್ತಿದ್ದು ಬೆಕ್ಕಿನ ಕಣ್ಣಿನಂತೆ ಹೊಳಪು ಹೊಂದಿರುವ ಕಾರಣ ಬೆಕ್ಕಿನ ಕಣ್ಣಿನ ಹಾವು(Forestin cat snake)  ಎಂದು ಕರೆಯಲಾಗುತ್ತಿದೆ.

    ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಪರೂಪದಲ್ಲಿ ಅಪರೂಪದ ಹಾವೊಂದು ಕಾಣಸಿಕ್ಕಿದೆ.

    ಬೆಕ್ಕಿನ ಕಣ್ಣಿನ ಹಾವು ಎಂದು ಕರೆಯಲಾಗುತ್ತಿದ್ದು ಬೆಕ್ಕಿನ ಕಣ್ಣಿನಂತೆ ಹೊಳಪು ಹೊಂದಿರುವ ಕಾರಣ ಬೆಕ್ಕಿನ ಕಣ್ಣಿನ ಹಾವು ಎಂದು ಕರೆಯಲಾಗುತ್ತಿದೆ.

    ರಾತ್ರಿ ವೇಳೆಯ ಸಂಚಾರಿಯಾಗಿರುವ ಈ ನಿರುಪದ್ರವಿ ಹಾಫಾರೆಸ್ಟಿನ್ ಕ್ಯಾಟ್ ಸ್ನೇಕ್ ಸಣ್ಣ ಹಕ್ಕಿ, ಒತಿಕ್ಯಾತ,ಹಕ್ಕಿಗಳ ಮೊಟ್ಟೆಯನ್ನು ಬೇಟೆಯಾಡಿ ತಿನ್ನುತ್ತವೆ.

    ವಿಷಕಾರಿಯಲ್ಲದ  ನಿರುಪದ್ರವಿಯಾಗಿರುವ ಅಪರೂಪದ ಈ ಪಾರೆಸ್ಟಿನ್ ಕ್ಯಾಟ್ ಸ್ನೇಕ್ ಬಲ್ನಾಡಿನ ರವಿಕೃಷ್ಣ ಕಲ್ಲಜೆ ಎನ್ನುವವರ ಮನೆಯಲ್ಲಿ ಪತ್ತೆಯಾಗಿದೆ.

    ಹಳದಿ ಬಣ್ಣದಲ್ಲಿ ಕಂದು‌ ಬಣ್ಣದ ಪಟ್ಟಿ ಹೊಂದಿರುವ ಹಾವನ್ನು ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರ್ ರಕ್ಷಣೆ ಮಾಡಿ ದೂರದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.

    https://youtu.be/iGaOobzSzmY

    Share Information
    Advertisement
    Click to comment

    Leave a Reply

    Your email address will not be published. Required fields are marked *