Connect with us

    BELTHANGADI

    ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ ಅಪ್ಪ, ಆತ್ಮಹತ್ಯೆ ಮಾಡಿಕೊಂಡ ತಾಯಿ

    ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ ಅಪ್ಪ, ಆತ್ಮಹತ್ಯೆ ಮಾಡಿಕೊಂಡ ತಾಯಿ

    ಮಂಗಳೂರು ಅಗಸ್ಟ್ 5: ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಮಾಡಿದ ಅಪ್ಪನ ಕೃತ್ಯದಿಂದ ಮನನೊಂದು ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಪೆರಾಡಿಯಲ್ಲಿ ನಡೆದಿದೆ.

    ಮೃತ ಮಹಿಳೆಯನ್ನು ಲೀಲಾ ಎಂದು ಗುರುತಿಸಲಾಗಿದೆ, ಲೀಲಾ ಅವರು ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಲೀಲಾ ಅವರ ಪತಿ ಸಾಧು ತನ್ನ ಸ್ವಂತ ಮಗಳ ಮೇಲೆ ನಿರಂತರ ಅತ್ಯಾಚಾರ ವೆಸಗಿದ್ದಾರೆ ಎಂದು ಹೇಳಲಾಗಿದ್ದು, ಇದರಿಂದಾಗಿ 9ನೇ ತರಗತಿ ಕಲಿಯುತ್ತಿರುವ ಪುತ್ರಿ ಗರ್ಭಿಣಿಯಾಗಿದ್ದಳು.

    ಮಗಳು ಗರ್ಭಿಣಿ ಎಂದು ತಿಳಿದ ಬಳಿಕ ತಾಯಿ ತನ್ನ ಅಪ್ರಾಪ್ತ ಮಗಳನ್ನು ವಿಚಾರಿಸಿದ್ದಾರೆ. ಈ ವೇಳೆ ಆಕೆ ತಂದೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ ವಿಚಾರವನ್ನು ತಿಳಿಸಿದ್ದಾಳೆ. ಇದರಿಂದ ಮನನೊಂದ ತಾಯಿ ಲೀಲಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇತ್ತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ತಂದೆ ಸಾಧು ತಲೆಮರೆಸಿಕೊಂಡಿದ್ದಾನೆ. ಸದ್ಯ ಬೆಳ್ತಂಗಡಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ಅತ್ಯಾಚಾರ ನಡೆಸಿರುವ ತಂದೆಯ ವಿರುದ್ಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ.

    Share Information
    Advertisement
    Click to comment

    Leave a Reply

    Your email address will not be published. Required fields are marked *