LATEST NEWS
ವಿಕಿರಣ ತಡೆಯುವ ಗುಣ ತುಳಸಿಗೆ ಇದೆ, ಇದನ್ನು ಮನುಷ್ಯನ ಮೇಲೆ ಪ್ರಯೋಗ ಮಾಡಿ ನೋಡಿದ್ದೇನೆ – ಬಾಬಾ ರಾಮ್ ದೇವ್

ವಿಕಿರಣ ತಡೆಯುವ ಗುಣ ತುಳಸಿಗೆ ಇದೆ, ಇದನ್ನು ಮನುಷ್ಯನ ಮೇಲೆ ಪ್ರಯೋಗ ಮಾಡಿ ನೋಡಿದ್ದೇನೆ – ಬಾಬಾ ರಾಮ್ ದೇವ್
ಉಡುಪಿ ನವೆಂಬರ್ 19: ತುಳಸಿಯಿಂದ ಮೊಬೈಲ್ ರೇಡಿಯೇಷನ್ ತಡೆಯಬಹುದು ಎಂಬ ಬಾಬಾ ರಾಮ್ ದೇವ್ ಹೇಳಿಕೆಗೆ ವಿಚಾರವಾದಿಗಳ ವಿರೋಧ ವ್ಯಕ್ತವಾದ ಹಿನ್ನಲೆ ಈ ಬಗ್ಗೆ ಪ್ರತಿಕ್ರಿಯಿಸಿದ ಬಾಬಾ ರಾಮ್ ದೇವ್ ತುಳಸಿಯಿಂದ ಮೊಬೈಲ್ ರೇಡಿಯೇಷನ್ ಕಡಿಮೆ ಯಾಗುತ್ತೆ, ಇದನ್ನು ಯಾರು ಕೂಡಾ ಪ್ರಾಯೋಗಿಕವಾಗಿ ಇದನ್ನು ಪ್ರಯತ್ನಿಸಬಹುದು ಎಂದರು.
ಕೆಲವರಿಗೆ ತುಳಸಿ, ದನ, ವೇದದ ಬಗ್ಗೆ ಮಾತನಾಡಿದರೆ ಸರಿ ಅನಿಸಲ್ಲ, ಅದನ್ನು ಸುಳ್ಳು ಎಂದು ಸಾಬೀತು ಮಾಡುವ ತರಾತುರಿಯಲ್ಲಿರುತ್ತಾರೆ. ವೇದ ಪರಂಪರೆಯನ್ನು ಒಪ್ಪುವುದರಲ್ಲಿ ತೊಂದರೆ ಇಲ್ಲ, ವೇದದಲ್ಲಿ ವೈಜ್ಞಾನಿಕ ಸತ್ಯಗಳು ಅಡಗಿವೆ. ವಿಕಿರಣ ತಡೆಯುವ ಗುಣ ತುಳಸಿಗೆ ಇದೆ, ಇದನ್ನು ಮನುಷ್ಯನ ಮೇಲೆ ಪ್ರಯೋಗ ಮಾಡಿ ನೋಡಿದ್ದೇನೆ, ವೈಜ್ಞಾನಿಕ ಸಂಶೋಧನೆಗೆ ಸಮಯ ಹಿಡಿಯಬಹುದು ಎಂದರು.

ಪೆರಿಯಾರ್ ಬಗ್ಗೆ ರಾಮ್ ದೇವ್ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಡಿಂಗ್ ಆಗಿದ್ದು ಈ ಕುರಿತಂತೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ ಬಾಬಾ ರಾಮ್ ದೇವ್ ಪೆರಿಯಾರ್ ದೇವಿ ದೇವತೆಗಳು ಸುಳ್ಳು, ವ್ಯಭಿಚಾರಿಗಳು ಅಂದಿದ್ರು, ದೇವತೆಗಳಿಗೆ ಚಪ್ಪಲಿ ಹಾರ ಹಾಕಿ ಅಂದಿದ್ದರು. ನಾನು ಪೆರಿಯಾರ್ ಗೆ ಚಪ್ಪಲ್ಲಿಯಲ್ಲಿ ಹೊಡೆಯಿರಿ ಅಂದ್ರೆ ಸರಿಯಾಗುತ್ತಾ?. ನನ್ನ ವಿರೋಧ ಇರುವುದು ಪೆರಿಯಾರ್ ಅವರ ವಿಚಾರಧಾರೆ ಯ ಬಗ್ಗೆ, ನಮ್ಮ ಪೂರ್ವಜರಿಗೆ ಬಯ್ಯೋದು, ಅವಮಾನಿಸುವುದು ಸರಿಯಾ?
ನಮ್ಮ ಸಮಾಜದಲ್ಲಿ ಅಸಮಾನತೆ ಇತ್ತು ನಿಜ. ಆದರೆ ಎಲ್ಲಕ್ಕೂ ಬ್ರಾಹ್ಮಣರೇ ಹೊಣೆ ಅನ್ನೋದು ಎಷ್ಡು ಸರಿ ಎಂದು ಪ್ರಶ್ನಿಸಿದರು.
ನಮ್ಮ ಪ್ರಾಚೀನ ಪರಂಪರೆ ಢೋಂಗಿ ಅಂತಾರೆ, ರಾಮ, ಕೃಷ್ಣ ಎಲ್ಲರೂ ಸುಳ್ಳು ಅಂತಾರೆ, ಈ ವಿಚಾರದಲ್ಲಿ ದಲಿತರು ಅನಗತ್ಯವಾಗಿ ನನಗೆ ಬಯ್ತಿದಾರೆ. ನನಗೆ ಚಪ್ಪಲಿ ಯಲ್ಲಿ ಹೊಡೆಯೋದಾಗಿ ಹೇಳ್ತಾರೆ. ನಾನು ಅಂಬೇಡ್ಕರ್ ಗೆ ಅವಮಾನ ಮಾಡಿಲ್ಲ. ಅಂಬೇಡ್ಕರ್ ಜಾತಿಮುಕ್ತ ಭಾರತ ಸಮರ್ಥನೆ ಮಾಡಿದವರು, ಆದರೆ ಅಂಬೇಡ್ಕರ್ ಅನುಯಾಯಿಗಳ ವಾದ ನಾನು ಒಪ್ಪಲ್ಲ. ಬ್ರಾಹ್ಮಣರು, ಕ್ಷತ್ರೀಯರು ವೈಶ್ಯರು ಹೊರಗಿಂದ ಬಂದವರು ಅಂತಾರೆ ಈ ವಿಚಾರ ನಾನು ಒಪ್ಪಲ್ಲ ಎಂದರು.