DAKSHINA KANNADA
ರೈಯ ಗೃಹ ಖಾತೆಗೆ ಕಾಂಗ್ರೆಸ್ ನಾಯಕರು ದೇವರ ಮೊರೆ

ಮಂಗಳೂರು, ಆಗಸ್ಟ್ 30 : ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ದೇವರ ಮೊರೆ ಹೋಗಿದ್ದಾರೆ ಆದರೆ ಇದು ಇತ್ತೀಚಿನ ಬೆಳವಣಿಗೆಗಳಿಂದ ಪ್ರಕ್ಷುಬ್ದವಾಗಿದ್ದ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಅಲ್ಲ. ಬದಲಿಗೆ ಅರಣ್ಯ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮನಾಥ ರೈ ಅವರಿಗೆ ಗೃಹಖಾತೆಯನ್ನು ಅನುಗ್ರಹಿಸಲು. ಅರಣ್ಯ ಸಚಿವ ಬಿ ರಮಾನಾಥ ರೈ ಅವರಿಗೆ ರಾಜ್ಯ ಗೃಹ ಖಾತೆ ಸಿಗುವ ಬಗ್ಗೆ ಮಾಹಿತಿ ದಟ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಮತ್ತು ಬೆಂಗಳೂರಿನಲ್ಲಿ ಚರ್ಚೆ ಕೂಡ ನಡೆದಿದೆ. ಗ್ರಹ ಖಾತೆಯನ್ನು ಪಕ್ಷ ಒದಗಿಸಿದರೆ ಅದನ್ನು ಚ್ಯುತಿ ಬರದ ರೀತಿಯಲ್ಲಿ ಸಮರ್ಥವಾಗಿ ನಿಭಾಯಿಸುವ ಬಗ್ಗೆ ಈಗಾಗಲೇ ಸಚಿವ ರಮಾನಾಥ್ ರೈ ಕೂಡ ಹೆಲಿಕೆ ನೀಡಿದ್ದಾರೆ. ಈ ನಡುವೆ ಅರಣ್ಯ ಸಚಿವ ರಮಾನಾಥ ರೈ ಅವರಿಗೆ ಗೃಹ ಸಚಿವರ ಖಾತೆ ದೊರೆಯಲು ಅವರ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕರು ಶ್ರೀ ದೇವಿಯ ಮೊರೆ ಹೋಗಿದ್ದಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಾಳಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಮುಖಂಡರು ಕಟೀಲು ದೇವಿಗೆ ಮೊರೆ ಇಟ್ಟಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಸಹಿತ ಮತ್ತಿತರ ಕಾಂಗ್ರೆಸ್ ಮುಖಂಡರು ದುರ್ಗಾಪರಮೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಬಗ್ಗೆ ಪ್ರತಿಕ್ರೀಯಿಸಿರುವ ಶಾಸಕ ಅಭಯಚಂದ್ರ ಜೈನ್ ಅವರು ರಮಾನಾಥ ರೈ ಅವರು ಜನರ ಏಳಿಗೆಗೆ ಮತ್ತು ಜಿಲ್ಲೆಯ ಸರ್ವತೋಮುಖ ಏಳಿಗೆಗೆ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದವರು.
ಈಗ ಗೃಹಖಾತೆ ಸಿಕ್ಕರೆ ಇನ್ನೂ ಹೆಚ್ಚಿನ ಅಭಿವೃದ್ದಿ ಜಿಲ್ಲೆಯಲ್ಲಿ ಕಾಣಲು ಸಾಧ್ಯ ಎಂದಿದ್ದಾರೆ. ಈ ನಡುವೆ ಗೃಹ ಖಾತೆ ನಿಭಾಯಿಸುವ ಕುರಿತು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರಮಾನಾಥ್ ರೈ ನಾನು ಯಾವೋತ್ತೂ ಗೃಹ ಸಚಿವ ಸ್ಥಾನ ಕೊಡುವ ಬಗ್ಗೆ ಬೇಡಿಕೆ ಇಟ್ಟಿಲ್ಲ. ಆದರೆ ಪಕ್ಷ ಗೃಹ ಖಾತೆಯ ಜವಾಬ್ದಾರಿ ನೀಡಿದರೆ ಬೇಡ ಅನ್ನುವಷ್ಟು ದೊಡ್ಡವನಲ್ಲ, ಪಕ್ಷ ಗೃಹ ಖಾತೆ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಒಟ್ಟಾರೆಯಾಗಿ ದೇವಿ ಅನುಗ್ರಹ ಯಾರ ಮೇಲಿರುತ್ತದೆ ಎಂದು ಕಾಡು ನೋಡಬೇಕಿದೆ.