LATEST NEWS
ಜನಾರ್ಧನ ಪೂಜಾರಿ ಕುರಿತು ಸುಳ್ಳು ಸುದ್ದಿಯ ಹಿಂದೆ ರಮಾನಾಥ ರೈ ಕೈವಾಡ – ಹರಿಕೃಷ್ಣ ಬಂಟ್ವಾಳ
ಜನಾರ್ಧನ ಪೂಜಾರಿ ಕುರಿತು ಸುಳ್ಳು ಸುದ್ದಿಯ ಹಿಂದೆ ರಮಾನಾಥ ರೈ ಕೈವಾಡ – ಹರಿಕೃಷ್ಣ ಬಂಟ್ವಾಳ
ಮಂಗಳೂರು ಮೇ 8: ಕಾಂಗ್ರೇಸ್ಸಿಗರು ಬಿ. ಜನಾರ್ದನ ಪೂಜಾರಿ ಕುರಿತು ಸುಳ್ಳುಸುದ್ದಿ ಹರಡಿಸಿ ಮತ್ತೊಮ್ಮೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡಿಸುವುದು ಕಾಂಗ್ರೇಸ್ಸಿಗರ ಷಡ್ಯಂತ್ರ ಒಂದು ಭಾಗವಾಗಿದೆ ಎಂದು ಆರೋಪಿಸಿದರು.
ಖ್ಯಾತ ಕನ್ನಡ ದಿನ ಪತ್ರಿಕೆ ಉದಯವಾಣಿ ಹೆಸರಿನಲ್ಲಿ ಸುಳ್ಳು ಸುದ್ದಿಯೊಂದನ್ನು ಸೃಷ್ಠಿಸಲಾಗಿದ್ದು, ಬಿಜೆಪಿಯನ್ನು ಸೋಲಿಸಲು ಕರೆ ಕೊಟ್ಟ ಪೂಜಾರಿ ಎಂಬ ಹೆಡ್ ಲೈನ್ ನೊಂದಿಗೆ ನವರಾತ್ರಿ ಸಂದರ್ಭದ ಪೋಟೋ ಒಂದನ್ನು ಪ್ರಕಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿತ್ತು. ಈ ರೀತಿಯ ಸುಳ್ಳು ಸುದ್ದಿಯನ್ನು ಸೃಷ್ಠಿಸುವ ಮೂಲಕ ಕಾಂಗ್ರೇಸ್ ಹಿರಿಯ ಮುಖಂಡ ಜನಾರ್ಧನ ಪೂಜಾರಿ ಅವರನ್ನು ಕಾಂಗ್ರೇಸ್ ಅವಮಾನಿಸಿದೆ. ಇದರ ಹಿಂದೆ ರಮಾನಾಥ ರೈ ಕೈವಾಡವಿದೆ ಎಂದು ಅವರು ಆರೋಪಿಸಿದರು.
ಇದಲ್ಲದೇ ಸಂಸದ ನಳಿನ್ ಕುಮಾರ್ ಕಟೀಲ್ ಬಗ್ಗೆಯೂ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ. ಪೂಜಾರಿ ಅವರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದಷ್ಟು ಗೌರವ , ಸಚಿವ ರಮಾನಾಥ ರೈ ತಮ್ಮ ಜನ್ಮದಲ್ಲಿ ನೀಡಿಲ್ಲ ಎಂದು ಕಿಡಿಕಾರಿದರು.
ರಮಾನಾಥ ರೈ ಅವರಿಗೆ ಸೋಲಿನ ಭೀತಿ ಕಾಡುತ್ತಿದ್ದು, ಈಗ ಬಿಲ್ಲವರ ಮತ ಪಡೆಯಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಈ ಜನ್ಮದಲ್ಲಿ ಕಾಂಗ್ರೇಸ್ ಗೆ ಬಿಲ್ಲವರು ಮತ ಹಾಕುವುದಿಲ್ಲ ಬಿಲ್ಲವರು ಜಾತಿ ನೋಡಿ ಮತ ಹಾಕಿಲ್ಲ, ಬಿಲ್ಲವರು ಎಂದಿಗೂ ರಾಷ್ಚ್ರವಾದಿಗಳು, ಈ ಬಾರಿ ನರೇಂದ್ರ ಮೋದಿ ಅವರಿಗೆ ಬಿಲ್ಲವರು ಮತ ನೀಡಲಿದ್ದಾರೆ ಎಂದು ಬಿಲ್ಲವರು ವಿಶ್ವಾಸ ವ್ಯಕ್ತಪಡಿಸಿದರು.
ಈ ಚುನಾವಣೆ ಕಾಂಗ್ರೇಸ್ ಹಾಗೂ ಭಾರತೀಯ ಸಂಸ್ಕೃತಿ ನಡುವಿನ ಹೋರಾಟ , ರಾಹುಲ್ ಗಾಂಧಿ ಅವರಿಂದ ಭಾರತೀಯ ಸಂಸ್ಕೃತಿಯ ರಕ್ಷಣೆ ಸಾಧ್ಯವಿಲ್ಲ ಎಂದು ಹೇಳಿದರು.