Connect with us

LATEST NEWS

ಹಿಂದೂ ಸಂಘಟನೆಗಳ ಬೆಂಬಲದಿಂದ ಕಪಾಲಿಬೆಟ್ಟ ಹೋರಾಟ ತೀವ್ರಗೊಳಿಸಲು ಹೋರಟ ಕಾಳಿ ಸ್ವಾಮಿಜಿ

ಹಿಂದೂ ಸಂಘಟನೆಗಳ ಬೆಂಬಲದಿಂದ ಕಪಾಲಿಬೆಟ್ಟ ಹೋರಾಟ ತೀವ್ರಗೊಳಿಸಲು ಹೋರಟ ಕಾಳಿ ಸ್ವಾಮಿಜಿ

ಮಂಗಳೂರು : ಕಾಂಗ್ರೇಸ್ ಮುಖಂಡ ಡಿ.ಕೆ. ಶಿವಕುಮಾರ್ ರಾಮನಗರದ ಕಪಾಲಿಬೆಟ್ಟದಲ್ಲಿ ನಿರ್ಮಿಸಲು ನಿರ್ಧರಿಸಿರುವ ಏಸುವಿನ ಪ್ರತಿಮೆಯ ವಿವಾದ ಇದೀಗ ಹಿಂದೂ ಸಂಘಟನೆಗಳ ಭದ್ರಕೋಟೆ ದಕ್ಷಿಣ ಕನ್ನಡಕ್ಕೂ ತಲುಪಿದೆ. ಏಸು ಪ್ರತಿಮೆಗೆ ತೀವೃ ವಿರೋಧ ವ್ಯಕ್ತಪಡಿಸಿರುವ ಕಾಳಿ ಮಠದ ಸ್ವಾಮೀಜಿ ಇದೀಗ ಈ ಪ್ರತಿಮೆಯ ವಿರುದ್ಧ ಜನಜಾಗೃತಿಗೆ ಮುಂದಾಗಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ಹಿಂದೂ ಸಂಘಟನೆಗಳನ್ನು ಒಗ್ಗೂಡಿಸಿ ಏಸು ಪ್ರತಿಮೆಯ ವಿರುದ್ಧ ನಿಲ್ಲಲು ರೂಪುರೇಶ ಸಿದ್ಧಪಡಿಸಲಾರಂಭಿಸಿದ್ದಾರೆ.

ರಾಮನಗರದ ಕಪಾಲಬೆಟ್ಟದಲ್ಲಿ ಡಿ.ಕೆ. ಶಿವಕುಮಾರ್ ನಿರ್ಮಿಸಲು ಹೊರಟಿರುವ ಏಸು ಪ್ರತಿಮೆಗೆ ಭಾರೀ ವಿರೋಧ ಎದುರಾಗಿದೆ. ಈಗಾಗಲೇ ಹಿಂದೂಪರ ಸಂಘಟನೆಗಳು ಈ ನಿರ್ಧಾರದ ವಿರುದ್ಧ ಬೀದಿಗಿಳಿದು ಹೋರಾಟವನ್ನೂ ನಡೆಸಿದೆ. ಹೋರಾಟದ ಮುಂಚೂಣಿಯಲ್ಲಿರುವ ಕಾಳಿ ಮಠದ ಶಿವಕುಮಾರ ಸ್ವಾಮೀಜಿ ಈ ವಿವಾದವನ್ನು ಇದೀಗ ರಾಜ್ಯದೆಲ್ಲೆಡೆ ಮುಟ್ಟಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಹಿಂದೂ ಸಂಘಟನೆಗಳ ಭದ್ರಕೋಟೆ ಎಂದೇ ಗುರುತಿಸಿಕೊಂಡಿರುವ ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿರುವ ಕಾಳಿ ಸ್ವಾಮೀಜಿ ಈ ಭಾಗದ ಎಲ್ಲಾ ಹಿಂದೂಪರ ಸಂಘಟನೆಗಳನ್ನು ಏಸು ಪ್ರತಿಮೆಯ ವಿರುದ್ಧ ಹೋರಾಟಕ್ಕೆ ಸಜ್ಜಾಗುವಂತೆ ಮನವಿ ಮಾಡುತ್ತಿದ್ದಾರೆ.

ರಾಜ್ಯ ಸರಕಾರ ಈ ಕುರಿತು ನಿರಾಸಕ್ತಿ ತೋರುತ್ತಿದೆ ಎಂದು ಆರೋಪಿಸುತ್ತಿರುವ ಸ್ವಾಮೀಜಿ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಅಶೋಕ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಎಲ್ಲರೂ ಸ್ನೇಹಿತರೇ ಆಗಿದ್ದಾರೆ. ಆದರೆ ಏಸು ಪ್ರತಿಮೆಯ ವಿಚಾರದಲ್ಲಿ ಮಾತ್ರ ಇವರ ಸ್ನೇಹವನ್ನು ತರಬಾರದು. ಗೃಹ ಸಚಿವ ಆಶೋಕ್ ಕೂಡಲೇ ಈ ಬಗ್ಗೆ ನಿರ್ಧಾರ ಕೈಗೊಂಡು ಪ್ರತಿಮೆಗಾಗಿ ಬೆಟ್ಟದಲ್ಲಿ ಹಾಕಿರುವ ಕಲ್ಲು, ಮಣ್ಣುಗಳನ್ನು ತೆರವುಗೊಳಿಸಬೇಕು. ಈ ವಿಚಾರದಲ್ಲಿ ಆರ್. ಆಶೋಕ್ ಉದಾಸೀನತೆ ತೋರುತ್ತಿರುವುದು ಹಲವು ಸಂಶಯಗಳಿಗೂ ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದರು.

ಕಾಳಿ ಸ್ವಾಮೀಜಿ ಈಗಾಗಲೇ ಜಿಲ್ಲೆಯ ಹಲವು ಹಿಂದೂ ಮುಖಂಡರನ್ನು ಭೇಟಿಯಾಗಿ ಕಪಾಲಿ ಬೆಟ್ಟದ ಕುರಿತು ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲೂ ಅವರು ಎಲ್ಲಾ ಸಂಘಟನೆಗಳ ಸಹಕಾರವನ್ನೂ ಕೋರುತ್ತಿದ್ದಾರೆ. ರಾಮ ಸೇನೆಯ ಮುಖಂಡರು, ಆರ್.ಎಸ್.ಎಸ್ ನ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನೂ ಭೇಟಿಯಾಗಿ ಹೋರಾಟದ ರೂಪುರೇಶೆ ಸಿದ್ಧಪಡಿಸಲು ಆರಂಭಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಹಿಂದೂ ಮತ್ತು ಕ್ರಿಶ್ಚಿಯನ್ ಮಧ್ಯೆ ಧ್ವೇಷ ಹಚ್ಚುವ ಕಾರ್ಯವನ್ನು ಕೂಡಲೇ ಕೈ ಬಿಡಬೇಕು. ಕಪಾಲಿಬೆಟ್ಟ ಮುನೀಶ್ವರ ಬೆಟ್ಟವಾಗಿದ್ದು, ಅದು ಹಾಗೆಯೇ ಉಳಿಯಬೇಕು. ಒಂದು ವೇಳೆ ಏಸುಪ್ರತಿಮೆಯನ್ನು ಸ್ಥಾಪಿಸಿಯೇ ಸಿದ್ಧ ಎಂದು ಬಲಪ್ರದರ್ಶನಕ್ಕೆ ಮುಂದಾದಲ್ಲಿ ಮುಂದಿನ ಬೆಳವಣಿಗೆಗೆಯನ್ನೂ ಅವರು ಎದುರಿಸಬೇಕು ಎನ್ನುವ ಎಚ್ಚರಿಕೆಯನ್ನು ಹಿಂದೂ ಮುಖಂಡರು ನೀಡಲಾರಂಭಿಸಿದ್ದಾರೆ.

ಗೋಮಾಳಕ್ಕೆ ಸೇರಿದ ಜಾಗ ಅದಾಗಿದ್ದು, ರಾಜ್ಯ ಸರಕಾರ ಕೂಡಲೇ ಆ ಜಾಗವನ್ನು ಒತ್ತುವರಿ ಮಾಡಬೇಕು. ಏಸುವಿನ ಪ್ರತಿಮೆ ಆ ಜಾಗವನ್ನು ಬಿಟ್ಟು ಎಲ್ಲಿ ಮಾಡಿದರೂ ಅಭ್ಯಂತರವಿಲ್ಲ ಎನ್ನುವ ನಿಲುವಿಗೂ ಇದೀಗ ಹಿಂದೂಪರ ಸಂಘಟನೆಗಳು ಬಂದಿದ್ದು, ಕಪಾಲಿ ಬೆಟ್ಟ ವಿವಾದ ಇದೀಗ ಮತ್ತೆ ಭುಗಿಲೇಳುವ ಲಕ್ಷಣಗಳೂ ಗೋಚರಿಸಲಾರಂಭಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *