LATEST NEWS
ರಾಮಾಯಣದ ರಾಮಸೇತು ಕಾಲ್ಪನಿಕವಲ್ಲ , ಮಾನವ ನಿರ್ಮಿತ..!
ರಾಮಾಯಣದ ರಾಮಸೇತು ಕಾಲ್ಪನಿಕವಲ್ಲ , ಮಾನವ ನಿರ್ಮಿತ..!
ಹೊಸದಿಲ್ಲಿ, ಡಿಸೆಂಬರ್ 13: ರಾಮಸೇತುವಿನ ಅಸ್ತಿತ್ವದ ಕುರಿತು ಇದ್ದ ಪ್ರಶ್ನೆಗೆ ಕೊನೆಗೂ ಉತ್ತರ ದೊರಕಿದೆ. ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿಯಾದುದಲ್ಲ.
ಅದು ಮಾನವ ನಿರ್ಮಿತವೆಂದು ಅಮೆರಿಕದ ವಿಜ್ಞಾನಿಗಳು ಸಾರಿ ಹೇಳಿದ್ದಾರೆ.
ಈ ಬಗ್ಗೆ ಅಮೆರಿಕದ ಡಿಸ್ಕವರಿ ಚಾನೆಲ್ ಸಾಕ್ಷ್ಯ ಚಿತ್ರವೊಂದನ್ನು ತಯಾರಿಸಿದೆ, ರಾಮೇಶ್ವರದಿಂದ ಲಂಕಾದ ಮನ್ನಾರ್‌ವರೆಗಿನ 50 ಕಿ.ಮೀ. ದೂರದ ಸೇತುವೆ ಬಗ್ಗೆ ಮಹ ತ್ವದ ಸಂಶೋಧನೆ, ಇತರ ಮಾಹಿತಿ ಗಳು ಈ ಚಿತ್ರದಲ್ಲಿವೆ.
ಇದರಲ್ಲಿ ರಾಮಸೇತುವಿನ ಅಸ್ತಿತ್ವದ ಕುರಿತಂತೆ ಅನೇಕ ವೈಜ್ಞಾನಿಕ ಉತ್ತರ ಗಳನ್ನು ಪಡೆಯಲಾಗಿದೆ.
ಇಂಡಿಯಾನಾ ಯೂನಿವರ್ಸಿಟಿ ನಾರ್ತ್ ವೆಸ್ಟ್, ಕೊಲರಾಡೋ ವಿಶ್ವವಿದ್ಯಾಲಯ ಮತ್ತು ಸೌತರ್ನ್ ಆರೆಗಾನ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ಅಭಿಪ್ರಾಯ, ಸಂಶೋಧನೆಯ ವರದಿಗಳನ್ನು ಈ ಸಾಕ್ಷ ಚಿತ್ರದಲ್ಲಿ ದಾಖಲಿಸಲಾಗಿದೆ.
ಸೇತುವೆ ಮಾನವ ನಿರ್ಮಿತವೇ ಎಂಬ ಬಗ್ಗೆ ಹಿಂದಿನಿಂದಲೂ ವಾದ ವಿವಾದಗಳಿವೆ.
ಇಲ್ಲಿನ ಮರಳಿನ ಪಟ್ಟಿ ನೈಸರ್ಗಿಕ. ಆದರೆ ಇದರ ಕೆಳಗಿರುವ ಸಾಮಗ್ರಿ ನೈಸರ್ಗಿಕವಲ್ಲ ಎಂದು ಸಾಕ್ಷ್ಯಚಿತ್ರದ ಪ್ರೋಮೋದಲ್ಲಿ ನಿರೂಪಕರು ಹೇಳುತ್ತಾರೆ.
ಅಷ್ಟೇ ಅಲ್ಲ, ಇಲ್ಲಿನ ಮರಳಿನ ಪಟ್ಟಿಯ ಕೆಳಗಿರುವ ಕಲ್ಲುಗಳು 7 ಸಾವಿರ ವರ್ಷಗಳ ಹಿಂದಿನದು ಮತ್ತು ಇತರ ಪ್ರದೇಶದಲ್ಲಿನ ಮರಳಿನ ಪಟ್ಟಿ ಸುಮಾರು 4 ಸಾವಿರ ವರ್ಷಗಳಷ್ಟು ಹಳೆಯದು ಎಂದು ಸೌತರ್ನ್ ಆರೆಗಾನ್ ಯೂನಿವರ್ಸಿಟಿ ವಿಜ್ಞಾನಿ ಚೆಲ್ಸಿಯಾ ರೋಸ್ ಹೇಳಿದ್ದಾರೆ.
ಈಗಾಗಲೇ ಅಂತರ್ಜಾಲದಲ್ಲಿ ಕಾರ್ಯಕ್ರಮದ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, 16 ಗಂಟೆಯಲ್ಲಿ 11 ಲಕ್ಷ ಜನರು ವೀಕ್ಷಿಸಿದ್ದಾರೆ. ಕೇಂದ್ರ ಸಚಿವೆ ಸ್ಮತಿ ಇರಾನಿ ಕೂಡ ಈ ಕಾರ್ಯಕ್ರಮದ ಪ್ರೋಮೋವನ್ನು ರಿಟ್ವೀಟ್ ಮಾಡಿದ್ದು, “ಜೈ ಶ್ರೀ ರಾಮ್’ ಎಂದು ಬರೆದುಕೊಂಡಿದ್ದಾರೆ.
ಆದರೇ ಭಾರತ ದೇಶದ ಭಾರತೀಯ ಪುರಾತತ್ವ ಇಲಾಖೆ ಏನು ಮಾಡ್ತಿದೆ?: ಅಮೆರಿಕದ ವಿಜ್ಞಾನಿಗಳು ಹಾಗೂ ಸಂಸ್ಥೆಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದರೆ, ಭಾರತೀಯ ಪುರಾತತ್ವ ಇಲಾಖೆ ಏನು ಮಾಡುತ್ತಿದೆ ಎಂಬ ಪ್ರಶ್ನೆ ಭಾರತೀಯರಲ್ಲಿ ಉಂಟಾಗಿದೆ.
ಏನಿದು ರಾಮ ಸೇತು ?
ಈ ಭೂಮಿಯ ಮೇಲೆ ರಾಜ್ಯವಾಳಿದ ಚಕ್ರವರ್ತಿ ರಾಮನಿಂದ ನಿರ್ಮಿತವಾದ ಈ ಸೇತುವೆ ಸುಮಅರು 7000 ವರ್ಷಗಳಷ್ಟು ಹಿಂದಿನ ಕಾಲಘಟ್ಟಕ್ಕೆ ಸೇರಿದ್ದೆಂದು ನಿರ್ಣಯಿಸಬಹುದು.
ಲಂಕೆಯಲ್ಲಿ ರಾಮ-ರಾವಣರ ನಡುವೆ ಮಹಾಯುದ್ಧ ನಡೆದು ವಿಜಯಿಯಾದ ರಾಮನು ಅಲ್ಲಿಂದ ಅಯೋಧ್ಯೆಗೆ ಪುಷ್ಪಕವಿಮಾನದಲ್ಲಿ ಪಯಣಿಸುವಾಗ ಕೆಳಗೆ ಕಂಡ ಸೇತುವೆಯನ್ನು ’ನಳಸೇತು’ ಎಂದು ಹೆಸರಿಸಿ, ಸೀತೆಗೆ ತೋರಿಸುತ್ತಾನೆ.
ಮುಂದೆ ಇದು ’ರಾಮಸೇತು’ ಎಂದು ಪ್ರಖ್ಯಾತವಾಗಿ ನಮ್ಮ ಹಲವಾರು ಕಾವ್ಯೇತಿಹಾಸಿಕ ಗ್ರಂಥಗಳಲ್ಲಿ ಹಾಗೂ ಶಾಸನವೇ ಮೊದಲಾದ ಹಲವಾರು ಚಾರಿತ್ರಿಕ ಮಾಹಿತಿಗಳಲ್ಲಿ ಕಾಣಸಿಗುತ್ತದೆ.
ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ತಯಾರಿಸಿದ ಭೂಪಟಗಳಲ್ಲಿ ಹಾಗೂ ವರದಿಗಳಲ್ಲಿ ಈ ಸೇತುವೆಯನ್ನು ’ಆಡಮ್ಸ್ ಬ್ರಿಡ್ಜ್’ ಎಂದು ಗುರುತಿಸಿದ್ದಾರೆ.
“ರಾಮಸೇತು ಎಂದೂ ಕರೆಯುವ ಆಡಮ್ಸ್ ಬ್ರಿಡ್ಜ್, ಶ್ರೀಲಂಕೆಯ ವಾಯವ್ಯ ಭಾಗದ ಸಮೀಪವಿರುವ ಮನ್ನಾರ್ ದ್ವೀಪಗಳು ಮತ್ತು ಭಾರತದ ದಕ್ಷಿಣ ಕರಾವಳಿಯಲ್ಲಿರುವ ರಾಮೇಶ್ವರಂ ಮಧ್ಯೆ ಇರುವ ಲೈಮ್ ಶೋಲ್‌ಗಳ ಜೋಡಣೆಯಿಂದಾಗಿದೆ.
ಈ ಸೇತುವೆಯು 47 ಕಿಲೋಮೀಟರ್ಮೈ ಉದ್ದವಿದ್ದು, ವಾಯವ್ಯದ ಪಾಲ್ಕ್ ಸ್ಟ್ರೇಟ್ ಇಂದ ನೈಋತ್ಯದಲ್ಲಿ ಮನ್ನಾರ್ ಕೊಲ್ಲಿಯನ್ನು ಪ್ರತ್ಯೇಕಿಸುತ್ತದೆ.
1902ರಲ್ಲಿ ಕಾಣುವ ಸಿ.ಡಿ. ಮಕೆಲೀನ್ ವರದಿ ಹಾಗೂ 1480ರಲ್ಲಿ ಏಶಿಯಾಟಿಕ್ ಸೊಸೈಟಿಯಲ್ಲಿ ದಾಖಲಾಗಿರುವ ಸಂಗತಿಯಂತೆ, ಈ ಸೇತುವೆ ಮೂರು ಭಾಗವಾಗಿ ಮುರಿಯುವವರೆಗೂ ರಾಮೇಶ್ವರದಿಂದ ಶ್ರೀಲಂಕೆಗೆ ಹೋಗುವ ಕಾಲುನಡಿಗೆಯ ದಾರಿಯಾಗಿ ಉಪಯೋಗದಲ್ಲಿತ್ತು ಎನ್ನುವುದು ತಿಳಿಯುತ್ತದೆ.
ಪತ್ನಿ ಸೀತೆಯನ್ನು ಅಪಹರಿಸಿದ ರಾವಣನೊಂದಿಗೆ ಯುದ್ಧಮಾಡಲು ರಾಮೇಶ್ವರದಿಂದ ಲಂಕೆಗೆ ಹೊರಟ ರಾಮನ ವಾನರಸೈನ್ಯಕ್ಕೆ ಎದುರಾದ ಮಹಾಸಾಗರಕ್ಕೆ ಕಟ್ಟಿದ ಸೇತುವೆಯನ್ನು ಹೋದ ದಶಕದಲ್ಲಿ ತೋರಿಸಿದ ನಾಸಾದ (NASA) ಉಪಗ್ರಹ ಛಾಯಾಚಿತ್ರಗಳು ಭಾರತೀಯರಲ್ಲಿ ಸಂಚಲನವನ್ನು ಮೂಡಿಸಿತು.
ಆದರೆ, ನಾಸಾ ತಜ್ಞರು ಉಪಗ್ರಹ ಚಿತ್ರಗಳಿಂದ ಆ ರಚನೆಯ ಕಾಲವನ್ನಾಗಲಿ, ಅದು ಮಾನವನಿರ್ಮಿತ ಎಂದಾಗಲೀ ಹೇಳಲಾಗುವುದಿಲ್ಲ ಎಂದರು.
ಅವರು ತೆಗೆದ ಚಿತ್ರಗಳಲ್ಲಿ, ಕಾಲುನಡಿಗೆಯಲ್ಲಿ ಸಮುದ್ರವನ್ನು ದಾಟುವ ಮಾರ್ಗವಾಗಿ ಈ ಸೇತುವೆಯು ಸ್ಪಷ್ಟವಾಗಿ ಕಾಣುತ್ತದೆ.
ಅಷ್ಟು ಅಲ್ಲದೆ, ವಿಶಿಷ್ಟ ರೀತಿಯಲ್ಲಿ ಬಾಗಿರುವುದರಿಂದಾಗಿ ಇದು ಮಾನವನಿರ್ಮಿತ ಎಂದು ತಿಳಿಯುತ್ತದೆ ಎಂದು ತಜ್ಞರು ಹೇಳುತ್ತಾರೆ.