Connect with us

LATEST NEWS

ಬೈಲೂರು ನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದ ಹುಲಿವೇಷ ತಂಡದ ಯುವಕರ ಜೊತೆ ರಕ್ಷಿತ್ ಶೆಟ್ಟಿ ಕುಣಿತ

ಉಡುಪಿ ಅಗಸ್ಟ್ 31: ಕೊರೊನಾದಿಂದಾಗಿ ಈ ಬಾರಿ ಕೃಷ್ಣ ಜನ್ಮಾಷ್ಠಮಿ ಹುಲಿವೇಷಗಳ ಸದ್ದಿಲ್ಲದೆ ಮುಗಿದಿದೆ. ಕೊರೋನಾ ಕಾರಣದಿಂದ ಉಡುಪಿಯಲ್ಲಿ ಈ ಬಾರಿ ಸರಳ ಶ್ರೀಕೃಷ್ಣಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಸ್ಯಾಂಡಲ್‌ವುಡ್ ನಟ ರಕ್ಷಿತ್ ಶೆಟ್ಟಿ ಈ ಬಾರಿ ಶ್ರೀಕೃಷ್ಣಜನ್ಮಾಷ್ಟಮಿ ಸಂದರ್ಭ ಕೂಡ ಹುಲಿವೇಷ ಕುಣಿದಿದ್ದಾರೆ.

ದೇವಸ್ಥಾನಗಳಿಂದ, ದೈವಸ್ಥಾನಗಳಿಂದ ಹೊರಡುವ ಹುಲಿವೇಷ ತಂಡಗಳು ಸಾಂಪ್ರದಾಯಿಕ ಲೋಬಾನ ಹಾಕುವ ಆಚರಣೆಯನ್ನು ಮಾತ್ರ ಮಾಡಿದೆ. ಬೈಲೂರು ನೀಲಕಂಠ ಮಹಾಬಬ್ಬುಸ್ವಾಮಿ ದೈವಸ್ಥಾನದಲ್ಲಿ ಜ್ಯೂನಿಯರ್ ಫ್ರೆಂಡ್ಸ್ ನ ಲೋಬಾನ ಹಾಕುವ ಸಂಪ್ರದಾಯದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭಾಗವಹಿಸಿದ್ದಾರೆ. ದೈವಸ್ಥಾನದ ಹುಲಿವೇಷ ತಂಡದ ಯುವಕರ ಜೊತೆ ರಕ್ಷಿತ್ ಶೆಟ್ಟಿ ಜಬರ್ದಸ್ತ್ ಸ್ಟೆಪ್ ಹಾಕಿದ್ದಾರೆ. ಪಕ್ಕಾ ವೇಷಧಾರಿಗಳಂತೆ ಕುಣಿದಿದ್ದಾರೆ.

 

ಉಳಿದವರು ಕಂಡಂತೆ ಚಿತ್ರಕ್ಕೂ ಮೊದಲು ಇದೇ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಇಲ್ಲಿನ ತಂಡವನ್ನು ರಕ್ಷಿತ್ ಚಿತ್ರೀಕರಣಕ್ಕೆ ಕರೆದೊಯ್ದಿದ್ದರು. ಚಿತ್ರದ ಸಕ್ಸಸ್ ಹಿಂದೆ ಬಬ್ಬುಸ್ವಾಮಿ ಕೊರಗಜ್ಜ ದೈವದ ಆಶೀರ್ವಾದ ಕೂಡ ಇದೆ ಎಂದು ರಕ್ಷಿತ್ ಶೆಟ್ಟಿ ಬಲವಾಗಿ ನಂಬಿದ್ದಾರೆ. ಪ್ರತಿ ವರ್ಷ ಅಷ್ಟಮಿ ಸಂದರ್ಭ ದೈವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಮತ್ತು ಪ್ರಾಂಗಣದಲ್ಲಿ ಹುಲಿ ಕುಣಿಯುವ ಸಂಪ್ರದಾಯ ನಡೆಸಿಕೊಂಡು ಬರುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *