FILM
ಉಡುಪಿ ಅಲೆವೂರಿನಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬ ಸಂಭ್ರಮ

ಬಹು ನಿರೀಕ್ಷಿತ #777 ಚಾರ್ಲಿ ಸಿನೆಮಾದ ವಿಡಿಯೋ ತುಣುಕು ಬಿಡುಗಡೆ
ಉಡುಪಿ ಜೂನ್ 6: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರ ಹುಟ್ಟು ಹಬ್ಬವನ್ನು ತಮ್ಮ ಹುಟ್ಟೂರು ಉಡುಪಿಯಲ್ಲಿ ಮನೆಮಂದಿ ಜೊತೆ ಸರಳವಾಗಿ ಆಚರಿಸಿದರು.
ಪ್ರತಿವರ್ಷ ಸಾವಿರಾರು ಅಭಿಮಾನಿಗಳ ಜೊತೆಗೆ ಅದ್ದೂರಿಯಾಗಿ, ತಮ್ಮ ಹುಟ್ಟು ಹಬ್ಬ ಆಚರಿಸುವ ರಕ್ಷಿತ್ ಶೆಟ್ಟಿ, ಈ ಬಾರೀ ಲಾಕ್ಡೌನ್ ಹಿನ್ನೆಲೆಯಲ್ಲಿ ತಂದೆ ತಾಯಿ, ಅಣ್ಣ ಅತ್ತಿಗೆ, ಅಣ್ಣನ ಮಕ್ಕಳ ಜೊತೆಗೆ ಉಡುಪಿಯ ಅಲೆವೂರಿನಲ್ಲಿ ಇರುವ ತಮ್ಮ ಮನೆಯಲ್ಲಿಯೇ ಕೇಕ್ ಕಟ್ ಮಾಡಿ ಸಿಂಪಲ್ ಆಗಿ ಸೆಲೆಬ್ರೆಟ್ ಮಾಡಿದರು.

ಇನ್ನೂ ಹುಟ್ಟು ಹಬ್ಬಕ್ಕೆ ರಕ್ಷಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಮುಂದಿನ ಸಿನಿಮಾ #777 ಚಾರ್ಲಿ ಸಿನಿಮಾದ ವಿಡಿಯೋ ತುಣುಕನ್ನು ಚಿತ್ರತಂಡ ಬಿಡುಗಡೆ ಮಾಡುವ ಮೂಲಕ ಶುಭ ಹಾರೈಸಿದೆ.