Connect with us

    FILM

    ಖ್ಯಾತ ಹಾಸ್ಯನಟ ರಾಜ್ ಪಾಲ್ ಯಾದವ್ ಆಸ್ತಿ ಬ್ಯಾಂಕ್ ಮುಟ್ಟುಗೋಲು

    ಮುಂಬೈ ಅಗಸ್ಟ್ 15: ಮಾಡಿದ ಸಾಲ ತೀರಿಸದ ಕಾರಣ ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜ್ ಪಾಲ್ ಯಾಧವ್ ಗೆ ಸೇರಿದ ಆಸ್ತಿಗಳನ್ನು ಬ್ಯಾಂಕ್ ಮುಟ್ಟುಗೋಲು ಹಾಕಿಕೊಂಡಿದೆ. ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡ ಕಾರಣ ಸಾಲದ ಬದಲಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ರಾಜ್​ಪಾಲ್ ಯಾದವ್​ಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.


    ರಾಜ್​ಪಾಲ್ ಯಾದವ್​ ಅವರಿಗೆ ಸೇರಿದ್ದು ಎನ್ನಲಾಗಿರುವ ಉತ್ತರ ಪ್ರದೇಶದ ಶಹಜಾನ್​ಪುರದಲ್ಲಿರುವ ಆಸ್ತಿಯನ್ನು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ರಾಜ್​ಪಾಲ್ ಯಾದವ್ ಈ ಜಮೀನನ್ನು ಖರೀದಿ ಮಾಡಿದ್ದರು. ಬಳಿಕ ತಮ್ಮ ಪೋಷಕರಾದ ನೌರಂಗ್ ಮತ್ತು ಗೋಧಾವರಿ ಅವರುಗಳ ಹೆಸರಲ್ಲಿ ನಿರ್ಮಾಣ ಸಂಸ್ಥೆಯೊಂದನ್ನು ಆರಂಭ ಮಾಡಿದ್ದರು. ಅದಕ್ಕೆ ನೌರಂಗ್-ಗೋಧಾವರಿ ಎಂಟರ್ಟೈನ್​ಮೆಂಟ್ ಎಂದು ಹೆಸರಿಟ್ಟಿದ್ದರು.

    ನೌರಂಗ್-ಗೋಧಾವರಿ ಎಂಟರ್ಟೈನ್​ಮೆಂಟ್ ನಿರ್ಮಾಣ ಸಂಸ್ಥೆಗೆ ರಾಜ್​ಪಾಲ್ ಯಾದವ್​ರ ಪತ್ನಿ ರಾಧಾ ಮಾಲಕಿ ಆಗಿದ್ದರು. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಸಿನಿಮಾ ಒಂದನ್ನು ನಿರ್ಮಾಣ ಮಾಡಿದ್ದರು ರಾಜ್​ಪಾಲ್ ಯಾದವ್. ಆ ಸಿನಿಮಾ ನಿರ್ಮಾಣಕ್ಕೆ ಶಹಜಾನ್​ಪುರದಲ್ಲಿನ ಜಮೀನು ಅಡವಿಟ್ಟು ಮೂರು ಕೋಟಿ ಸಾಲ ಪಡೆದಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಟ್ಟರ್ ಫ್ಲಾಪ್​ ಆಯ್ತು. ರಾಜ್​ಪಾಲ್ ಯಾದವ್​ಗೆ ಸಾಲ ಮರುಪಾವತಿ ಮಾಡಲು ಆಗಲಿಲ್ಲ.

    ಮೂರು ಕೋಟಿ ರೂಪಾಯಿ ಸಾಲ ಬಡ್ಡಿ, ಇನ್ನಿತರೆ ಶುಲ್ಕ, ದಂಡಗಳು ಸೇರಿಕೊಂಡು ಈಗ 11 ಕೋಟಿ ರೂಪಾಯಿಗಳಾಗಿದ್ದು, ನೊಟೀಸ್​ಗಳನ್ನು ಕಳಿಸಿ-ಕಳಿಸಿ ಸುಸ್ತಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದವರು ಇದೇ ತಿಂಗಳ ಎರಡನೇ ವಾರದಲ್ಲಿ ಶಹಜಾನ್​ಪುರಕ್ಕೆ ತೆರಳಿ ರಾಜ್​ಪಾಲ್ ಯಾದವ್​ ಅವರಿಗೆ ಸೇರಿದ ಅಡವಿಟ್ಟಿದ್ದ ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *