BELTHANGADI
ಬೆಳ್ತಂಗಡಿ ಮೇಘಸ್ಪೋಟಕ್ಕೆ ಉಕ್ಕಿ ಹರಿದ ನದಿಗಳು..

ಪ್ರವಾಹ ಮಟ್ಟದಲ್ಲಿ ಹರಿದ ನೇತ್ರಾವತಿ, ಮೃತ್ಯುಂಜಯ ನದಿ
ಮಂಗಳೂರು ಜೂನ್ 6: ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ, ಕುಕ್ಕಾವು, ಮಿತ್ತಬಾಗಿಲು, ಮಲವಂತಿಕೆ ಪ್ರದೇಶದಲ್ಲಿ ಮೇಘಸ್ಪೋಟ ಉಂಟಾಗಿದ್ದು, ಸತತ ಮೂರು ಗಂಟೆಗಳ ಕಾಲ ಸುರಿದ ಭಾರಿ ಮಳೆಗೆ ನದಿಗಳು ಪ್ರವಾಹ ಮಟ್ಟದಲ್ಲಿ ಹರಿಯಲಾರಂಭಿಸಿದೆ.
ಮಳೆಗಾಲ ಪ್ರಾರಂಭವಾಗಿ ಇನ್ನು ಕಲವೆ ದಿನಗಳಾಗಿರುವ ನಡುವೆಯೇ ದಕ್ಷಿಣಕನ್ನಡ ಜಿಲ್ಲೆಯ ನದಿಗಳಲ್ಲಿ ಪ್ರವಾಹ ತಲೆದೊರಲಾರಂಭಿಸಿದೆ. ಇಂದು ಸಂಜೆ ಬೆಳ್ತಂಗಡಿ ತಾಲೂಕಿನನ ದಿಡುಪೆ,ಕುಕ್ಕಾವು ಮಿತ್ತಬಾಗಿಲು, ಮಲವಂತಿಗೆ, ಚಾರ್ಮಾಡಿ ಮೊದಲಾದ ಕಡೆಗಳಲ್ಲಿ ಸತತ ಮೂರು ಗಂಟೆ ಸುರಿದ ಗುಡುಗು ಸಹಿತ ಮಳೆಗೆ ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ನೀರಿನ ಮಟ್ಟದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು ಅಪಾಯದ ಮಟ್ಟದಲ್ಲಿ ನದಿಗಳಲ್ಲಿ ನೀರು ಹರಿದಿದೆ.

ಕಳೆದ ಬಾರಿಯ ಮಳೆಗಾಲದಲ್ಲಿ ಪ್ರವಾಹ ಇದೇ ಪ್ರದೇಶದಲ್ಲಿ ಭಾರೀ ಹಾನಿ ಮಾಡಿತ್ತು. ಈ ಬಾರಿ ಮಳೆಗಾಲ ಶುರುವಾಗುವ ಮೊದಲೇ ಪ್ರವಾಹದ ಮಟ್ಟದಲ್ಲಿ ಹರಿದ ನದಿಗಳ ನೀರು ಹರಿಯುತ್ತಿರುವುದು ಸ್ಥಳೀಯ ನಿವಾಸಿಗಳಲ್ಲಿ ಭಾರೀ ಆತಂಕ ಸೃಷ್ಠಿಸಿದೆ.