ರೈಲಿನಲ್ಲಿನ ನಿದ್ರೆ ಸಮಯ ಕಡಿತಗೊಳಿಸಿದ ರೈಲ್ವೆ ಇಲಾಖೆ
ರೈಲಿನಲ್ಲಿನ ನಿದ್ರೆ ಸಮಯ ಕಡಿತಗೊಳಿಸಿದ ರೈಲ್ವೆ ಇಲಾಖೆ
ನವದೆಹಲಿ ಸೆಪ್ಟೆಂಬರ್ 17: ಭಾರತೀಯ ರೈಲ್ವೆಯ ಮುಂಗಡ ಬುಕಿಂಗ್ ಬೋಗಿಗಳಲ್ಲಿನ ಲೋವರ್ ಬರ್ತ್ ಮತ್ತು ಮಿಡಲ್ ಬರ್ತ್ ನ ನಿದ್ರೆ ಸಮಯವನ್ನು ಕಡಿಮೆಗೊಳಿಸುವ ಮೂಲಕ , ಅತಿಯಾಗಿ ನಿದ್ರೆ ಮಾಡುವುದರಿಂದ ಆಗುತ್ತಿರುವ ಜಗಳಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದೆ.
ರೈಲ್ವೆ ಬೋರ್ಡ್ ಹೊರಡಿಸಿರುವ ಆದೇಶದ ಪ್ರಕಾರ ಮುಂಗಡ ಬುಕ್ ಮಾಡಿರುವ ಪ್ರಯಾಣಿಕರು ಮಲಗುವ ಸಮಯ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ಮಾತ್ರವಾಗಿದ್ದು , ನಂತರ ಸೀಟ್ ಗಳನ್ನು ಕುಳಿತುಕೊಳ್ಳಲು ಬಿಡಬೇಕು ಎಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಈ ಆದೇಶ ಹೊರಡಿಸುವ ಮೊದಲು ರೈಲ್ವೆಯಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೂ ನಿದ್ರಿಸುವ ಅವಕಾಶ ಇತ್ತು.
ಈ ಆದೇಶದಲ್ಲಿ ಕೆಲವು ಪ್ರಯಾಣಿಕರಿಗೆ ವಿನಾಯಿತಿ ನೀಡಲಾಗಿದ್ದು, ಅಂಗವಿಕಲರು, ಗರ್ಭಿಣಿ ಹೆಂಗಸರು ಅಗತ್ಯ ಬಿದ್ದರೆ ನಿಗದಿತ ಸಮಯದ ನಂತರವೂ ನಿದ್ರೆ ಮಾಡಬಹುದಾಗಿದೆ.
ರೈಲ್ವೆ ಟಿಟಿಇ ಅವರಿಗೆ ಅನುಮತಿಸಿದ ಸಮಯಕ್ಕಿಂತಲೂ ಅಧಿಕ ಸಮಯ ನಿದ್ರೆ ಮಾಡುವವರ ವಿರುದ್ದ ಕ್ರಮಕೈಗೊಳ್ಳಲು ಅಧಿಕಾರ ನೀಡಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.