LATEST NEWS
ಮಸಾಜ್ ಪಾರ್ಲರ್ ಗೆ ದಾಳಿ ಮೂವರ ಸೆರೆ

ಮಸಾಜ್ ಪಾರ್ಲರ್ ಗೆ ದಾಳಿ ಮೂವರ ಸೆರೆ
ಮಂಗಳೂರು ಎಪ್ರಿಲ್ 8: ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಎಸ್.ಆರ್ ಟಿ ಸಿ ಬಸ್ ನಿಲ್ದಾಣ ಬಳಿಯಿರುವ ಪಾಮ್ ಟಚ್ ಎಂಬ ಹೆಸರಿನ ಮಸಾಜ್ ಸೆಂಟರ್ ಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬರ್ಕೆ ಪೊಲೀಸ್ ಠಾಣೆಯ ಪೊಲೀಸರು ಧಾಳಿ ಮಾಡಿ 3 ಜನರನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಮಂಗಳೂರು ನಗರದ ಬಿಜೈ ಕೆ.ಎಸ್.ಆರ್ ಟಿ.ಸಿ ಬಸ್ ನಿಲ್ದಾಣ ಬಳಿಯಿರುವ ಆದಿತ್ಯ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಪಾಮ್ ಟಚ್ ಎಂಬ ಮಸಾಜ್ ಸೆಂಟರ್ ನಲ್ಲಿ ಯುವತಿಯನ್ನು ಹಾಗೂ ಮಹಿಳೆಯರನ್ನು ಇಟ್ಟುಕೊಂಡು ಬಾಡಿ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಬರ್ಕೆ ಪೊಲೀಸರು ಮಸಾಜ್ ಪಾರ್ಲರ್ ಗೆ ದಾಳಿ ನಡೆಸಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದ ಉಮೇಶ್, ಜಗದೀಶ್, ಮಹೇಂದ್ರ ಕುಮಾರ್ ಎಂಬವರನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ.

ಆರೋಪಿಗಳು ಈ ಮಸಾಜ್ ಪಾರ್ಲರ್ ನಲ್ಲಿ ಬಾಡಿ ಮಸಾಜ್ ಎಂಬ ಹೆಸರಿನಲ್ಲಿ ವೇಶ್ಯಾವಾಟಿಕೆಗೆ ಪ್ರೇರೆಪಿಸುತ್ತಿದ್ದರು. ಈ ಮಸಾಜ್ ಸೆಂಟರ್ ನಲ್ಲಿದ್ದ 4 ನೊಂದ ಯುವತಿಯರನ್ನು ರಕ್ಷಿಸಲಾಗಿದೆ. ಆರೋಪಿಗಳನ್ನು ಮುಂದಿನ ಕ್ರಮಕ್ಕಾಗಿ ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.