Connect with us

    LATEST NEWS

    ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ – ಶಾಸಕ ರಘುಪತಿ ಭಟ್

    ಉಡುಪಿ ಎಪ್ರಿಲ್ 12: ಟಿಕೆಟ್ ಮಿಸ್ ಆದ ಬೆನ್ನಲ್ಲೆ ಶಾಸಕ ರಘುಪತಿ ಭಟ್ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ಬೇರೆ ಪಕ್ಷ ಸೇರುವುದಿಲ್ಲ ಆದರೆ ಟಿಕೆಟ್ ಹಂಚಿಕೆ ಸಂದರ್ಭ ಪಕ್ಷ ನಡೆಸಿಕೊಂಡ ರೀತಿ ಬೇಸರ ತಂದಿದೆ ಎಂದಿದ್ದಾರೆ.

    ಪೆರಂಪಳ್ಳಿಯ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಪಕ್ಷ ಸೀಟ್ ನೀಡದೇ ಇರುವುದಕ್ಕೆ ಬೇಸರವಿಲ್ಲ. ಆದರೆ, ಪಕ್ಷ ‌ನಡೆಸಿಕೊಂಡ ರೀತಿ ಸಾಕಷ್ಟು ಬೇಸರ ತಂದಿದೆ ಮತ್ತು ಶಾಕ್ ಕೂಡ ಆಗಿದೆ.

     

    ಕಾರ್ಯಕರ್ತರನ್ನು ನಡು ನೀರಿನಲ್ಲಿ ಬಿಡುವ ಪ್ರಶ್ನೆಯೇ ಇಲ್ಲ. ಯಾಕೆ ಹೀಗಾಯಿತು‌ ಎಂಬುದು ತುಂಬ ಬೇಸರ ತಂದಿದೆ. ನಾನು ಬೆಳೆಸಿದ ಹುಡುಗ ಇಂದು ಅಭ್ಯರ್ಥಿಯಾಗಿದ್ದು, ಅವರಿಗೆ ಶುಭಾಶಯ ಕೋರುತ್ತೇನೆ. ಅಭ್ಯರ್ಥಿ ಬಗ್ಗೆ ಯಾವುದೇ ಆಕ್ಷೇಪವಿಲ್ಲ. ಉಡುಪಿಯಲ್ಲಿ ಪಾರ್ಟಿ ಕಟ್ಟಿದ್ದೇನೆ ಮತ್ತು ಬಿಜೆಪಿಯಿಂದ ಇಲ್ಲಿ ಯಾರು ನಿಂತರೂ ಗೆಲ್ಲಲಿದ್ದಾರೆ ಅಂತಹ ಸ್ಥಿತಿ ನಿರ್ಮಾಣ ಮಾಡಿದ್ದೇನೆ. ಪಕ್ಷಕ್ಕೆ ಈಗ ನನ್ನ ಅವಶ್ಯಕತೆ ಇಲ್ಲ ಎಂಬುದು ತೋರಿಸುತ್ತಿದ್ದಾರೆ. ಅಮಿತ್ ಶಾ ಬೇಡ, ರಾಜ್ಯ ನಾಯಕರು ಅಥವಾ ಜಿಲ್ಲಾಧ್ಯಕ್ಷರು ಕರೆ ಮಾಡದೇ ಇರುವುದು ಬೇಸರ ತಂದಿದೆ ಎಂದರು.

    ಜಾತಿಯ ಕಾರಣಕ್ಕೆ ಟಿಕೆಟ್‌ ಕೊಡಲು ಸಾಧ್ಯವಿಲ್ಲ ಎಂದು ಮೊದಲೇ ಹೇಳಿದ್ದರೆ, ಈಶ್ವರಪ್ಪ ಅವರಂತೆ ಸ್ವಯಂ ರಾಜಕೀಯ ನಿವೃತ್ತಿ ಪಡೆಯುತ್ತಿದ್ದೆ. ಕೊನೆಯ ಕ್ಷಣದವರೆಗೂ ಟಿಕೆಟ್‌ ಕೊಡುವುದಾಗಿ ಹಿರಿಯ ನಾಯಕರು ಭರವಸೆ ನೀಡಿದ್ದರು. ಅಗತ್ಯಬಿದ್ದರೆ 2 ವಿಧಾನಸಭಾ ಕ್ಷೇತ್ರಗಳಿಗೆ ಬ್ರಾಹ್ಮಣ ಸಮುದಾಯದವರನ್ನು ಪರಿಗಣಿಸುವುದಾಗಿ ಹೇಳಿಯೂ ಟಿಕೆಟ್‌ ನಿರಾಕರಿಸಿರುವುದು ನೋವು ತಂದಿದೆ ಎಂದು ರಘುಪತಿ ಭಟ್‌ ಹೇಳಿದರು. ಉಡುಪಿ ವಿಧಾನಸಭಾ ಕ್ಷೇತ್ರದ ಮತದಾರರು ಮೂರು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದಾರೆ. ಇಲ್ಲಿನ ಮತದಾರರು ಎಂದೂ ಜಾತಿ ನೋಡಿ ಮತ ಹಾಕಲಿಲ್ಲ. ಬಿಲ್ಲವರು, ಮೊಗವೀರರು ಸೇರಿದಂತೆ ಅತಿ ಹೆಚ್ಚು ಹಿಂದುಳಿದ ವರ್ಗಗಳ ಮತದಾರರು ಇರುವ ಕ್ಷೇತ್ರದಿಂದ ಆಯ್ಕೆಯಾದ ಬಗ್ಗೆ ಹೆಮ್ಮೆ ಇದೆ ಎಂದರು.

    Share Information
    Advertisement
    Click to comment

    You must be logged in to post a comment Login

    Leave a Reply