BELTHANGADI
ಧರ್ಮಸ್ಥಳ ಪ್ರಕರಣದಲ್ಲಿ ಆರೋಪ ಮಾಡ್ತಿರೋನು ಮುಸ್ಲಿಂ ವ್ಯಕ್ತಿ – ಇದಕ್ಕೆ ಕೇರಳ ಸರಕಾರ ಸಪೋರ್ಟ್ – ಆರ್ ಅಶೋಕ್

ಮೈಸೂರು ಜುಲೈ 28: ಧರ್ಮಸ್ಥಳ ಪ್ರಕರಣದಲ್ಲಿ ಆರೋಪ ಮಾಡುತ್ತಿರುವ ಅನಾಮಧೇಯ ದೂರುದಾರ ಮುಸ್ಲಿಂ ವ್ಯಕ್ತಿಯಾಗಿದ್ದು, ಆತನಿಗೆ ಕೇರಳ ಸರಕಾರದ ಸಪೋರ್ಟ್ ಇದೆ ಎಂದು ವಿರೋಧಪಕ್ಷದ ನಾಯಕ ಆರ್ ಅಶೋಕ್ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು ಅನಾಮಧೇಯ ವ್ಯಕ್ತಿಯ ಹಿಂದೆ ಕೇರಳ ಸರ್ಕಾರ ಇದೆ. ಇಲ್ಲಿ ಯಾರಿಗೂ ಕಾಣದ ಕೈ ಕೆಲ್ಸ ಮಾಡ್ತಿದೆ. ಪ್ರಕರಣ ಜಟಿಲ ಆಗ್ತಿಲ್ಲ, ಜಟಿಲ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆರೋಪ ಮಾಡುತ್ತಿರೋದು ಯಾರೋ ಒಬ್ಬ ಮುಸ್ಲಿಂ ವ್ಯಕ್ತಿ. ಈ ಕೇಸ್ ಬ್ಯಾಗ್ರೌಂಡ್ ಹಿಂದೆ ಇರೋದು ಕೇರಳ ಸರ್ಕಾರ. ಧರ್ಮಸ್ಥಳಕ್ಕೂ ಕೇರಳಕ್ಕೂ ಏನು ಸಂಬಂಧ? ಪ್ರಕರಣವನ್ನು ಎಸ್ಐಟಿಗೆ ವರ್ಗಾವಣೆ ಮಾಡಿದ್ದಾರೆ, ಸ್ವಾಗತ ಮಾಡ್ತೀನಿ. ಧರ್ಮಸ್ಥಳದವರು ಕೂಡ ಸ್ವಾಗತಿಸಿದ್ದಾರೆ.

ಈ ಪ್ರಗತಿಪರರ ಗ್ಯಾಂಗ್ ನಾಳೆ ಎಸ್ಐಟಿಯನ್ನು ಒಪ್ಪಲ್ಲ. ಅದು ಕೂಡ ಸರಿಯಾಗಿ ತನಿಖೆ ಮಾಡಿಲ್ಲ ಅಂತಾರೆ. ಅವರ ಪರ ರಿಪೋರ್ಟ್ ಕೊಟ್ರೆ ಸರಿ ಎಂದು ಒಪ್ಪಿಕೊಳ್ಳುತ್ತಾರೆ. ಈ ಕಾರಣಕ್ಕೆ ಸಿಎಂ ನೇತೃತ್ವದಲ್ಲಿ ತನಿಖೆ ನಡೆಯಲಿ ಎಂದು ಆಗ್ರಹಿಸಿದರು. ಬಂದಿರುವ ವ್ಯಕ್ತಿ ಬುರುಡೆ ಕೊಡ್ತಾನೋ. ಬುರುಡೆ ಬಿಡ್ತಾನೋ ಕಾದು ನೋಡೋಣ. ಈ ಧರ್ಮಸ್ಥಳದ ಸುದ್ದಿ ಅಲ್ಲಜ್ಮೀರಾ ಕೇರಳದಲ್ಲಿ ಚರ್ಚೆ ಆಗ್ತಿದೆ. ಇದರ ಹಿಂದಿನ ಷಡ್ಯಂತ್ರ ತನಿಖೆಯಲ್ಲಿ ಹೊರ ಬರಲಿದೆ. ಬಳಿಕ ನಾನು ಮತ್ತಷ್ಟು ಪ್ರತಿಕ್ರಿಯೆ ನೀಡುತ್ತೇನೆ ಎಂದು ಅಶೋಕ್ ಹೇಳಿದ್ದಾರೆ
ಧರ್ಮಸ್ಥಳದ ಮಂಜುನಾಥನಿಗೂ ಇದಕ್ಕೂ ಸಂಬಂಧ ಇಲ್ಲ. ಇದರ ಹಿಂದೆ ಯಾರೇ ಇದ್ದರೂ ಶಿಕ್ಷೆ ಆಗಲಿ. ಇದು ಪಿತೂರಿಯ ಒಂದು ಭಾಗ.ಎಷ್ಟು ಬುರುಡೆಗಳು ಬರ್ತವೇ ಗೊತ್ತಾಗಲಿ, ಆ ಮೇಲೆ ಎಲ್ಲವೂ ಗೊತ್ತಾಗುತ್ತದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಮೈಸೂರಿನಲ್ಲಿ ಹೇಳಿದ್ದಾರೆ.