LATEST NEWS
ಸ್ಪಾ…. ಲಂಚ ಪ್ರಕರಣದ ಸತ್ಯಾ ಸತ್ಯತೆ ಬಯಲಾಗುವುದೇ?
ಸ್ಪಾ…. ಲಂಚ ಪ್ರಕರಣದ ಸತ್ಯಾ ಸತ್ಯತೆ ಬಯಲಾಗುವುದೇ?
ಮಂಗಳೂರು ನವೆಂಬರ್ 3: ಪೊಲೀಸ್ ಸಿಬ್ಬಂದಿಯೊಬ್ಬರು ಸ್ಫಾ ಮಾಲೀಕರಿಂದ ಲಂಚ ಸ್ವೀಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಡಾ . ಹರ್ಷಾ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ . ಮಂಗಳೂರಿನ ಪೂರ್ವ ಪೊಲೀಸ್ ಠಾಣೆ ಕದ್ರಿಯ ಯಸ್ ಬಿ ಅಥವಾ ಠಾಣಾ ವ್ಯಾಪ್ತಿಯ ಗುಪ್ತ ಮಾಹಿತಿ ಸಂಗ್ರಹ ಪೊಲೀಸ್ ಸಿಬ್ಬಂದಿ ಪ್ರಶಾಂತ ಶೆಟ್ಟಿ ಅವರನ್ನು ಈ ಪ್ರಕರಣ ಕ್ಕೆ ಸಂಬಂಧಿಸಿದಂತೆ ಅಮಾನತ್ತು ಮಾಡಲಾಗಿದೆ.
ಅಧಿಕೃತ ಲೈಸೆನ್ಸ್ ಇದ್ದರೂ ಕೂಡ ಸುಳ್ಳು ಕೇಸ್ ಹಾಕೋದಾಗಿ ಬೆದರಿಸಿ ಸ್ವಾ ಮಾಲೀಕರಿಂದ ಲಂಚ ಪಡೆಯುತ್ತಿದ ಪೊಲೀಸ್ ಪೇದೆಯನ್ನು ಅಮಾನತು ಮಾಡುವಂತೆ ಮಂಗಳೂರು ಪೊಲೀಸ್ ಆಯುಕ್ತ ಡಾ. ಪಿ.ಎಸ್ ಹರ್ಷ ಆದೇಶಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ಪ್ರಶಾಂತ್ ಅಧೀಕೃತ ಲೈಸೆನ್ಸ್ ಇದ್ದು ಸ್ಪಾ ಅಥವಾ ಮಸಾಜ್ ಪಾರ್ಲರ್ ನಡೆಸುತ್ತಿರುವ ಮಾಲಕರಿಗೆ ಸುಳ್ಳು ಕೇಸ್ ಹಾಕಿಸುವುದಾಗಿ ಬೆದರಿಸಿ ಕಿರುಕುಳು ನೀಡಿ ಲಂಚ ಹಣ ಪಡೆಯುತ್ತಿದ್ದ ಎಂದು ಆರೋಪಿಸಲಾಗಿದೆ. , ಅಲ್ಲದೆ ಲಂಚದ ಹಣ ಆನ್ ಲೈನ್ ಮೂಲಕ ಪಡೆದಿರುವ ದಾಖಲೆಗಳು ಪತ್ತೆ ಯಾಗಿದ್ದು ಪ್ರಶಾಂತ್ ಶೆಟ್ಟಿ ಲಂಚ ಪಡೆದಿರುವುದು ಸಾಬೀತಾಗಿದೆ. ಈ ಸುದ್ದಿ ಈಗಾಗಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆ ನಡೆಸಲು ಕಮಿಷನರ್ ಡಾ ಹರ್ಷಾ ಆದೇಶಿಸಿದ್ದಾರೆ. ತಪ್ಪಿತಸ್ತ ಯಾರನ್ನು ಕ್ಷಮಿಸುವ ಪ್ರಶ್ನೆ ಇಲ್ಲ ಎಂದು ಡಾ ಹರ್ಷಾ ತಿಳಿಸಿದ್ದಾರೆ. ಆದರೆ ಇಲ್ಲಿ ಉದ್ಭವಿಸುವ ಪ್ರಶ್ನೆ ಈ ಪ್ರಕರಣದಲ್ಲಿ ಕೇವಲ ಠಾಣಾ ಎಸ್ ಬಿ ಸಿಬ್ಬಂದಿ ಪ್ರಶಾಂತ್ ಶೆಟ್ಟಿ ಮಾತ್ರ ತಪ್ಪಿ ತಸ್ತ ರನ್ನಾಗಿಸುವುದು ಎಷ್ಟು ಸರಿ ? ಎಂಬ ಪ್ರಶ್ನೆ ಮೂಡಿದೆ. ಈ ಪ್ರಕರಣದಲ್ಲಿ ಠಾಣೆಯ ಇನ್ನಿತರರ ಕೈವಾಡ ವಿದೆ ಎನ್ನುವುದು ಸ್ಪಷ್ಟ.
ಪ್ರಶಾಂತ ಶೆಟ್ಟಿ ಯಾರ ಆದೇಶ ದಿಂದ ಈ ಲಂಚ ಸ್ವೀಕರಿಸುತ್ತಿದ್ದರು ? ಎಂಬುದರ ಬಗ್ಗೆ ಸ್ಪಷ್ಟ ತನಿಖೆ ಯಾಗಬೇಕಿದೆ. ಸಾಮಾನ್ಯ ವಾಗಿ ಠಾಣೆಯ ಎಸ್ ಬಿ ಸಿಬ್ಬಂದಿ ಏನು ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಈ ಹಿನ್ನೆಯಲ್ಲಿ ಕೇವಲ ಪ್ರಶಾಂತ್ ಶೆಟ್ಟಿ ಮಾತ್ರ ಈ ಪ್ರಕರಣದಲ್ಲಿ ತಪ್ಪಿ ತಸ್ತನನ್ನಾಗಿಸುವುದು ಎಷ್ಟು ಸರಿ ? ಠಾಣೆಯ ಸಿಬ್ಬಂದಿಗಳು ನಡೆಸುವ ಅಕ್ರಮ ಚಟುವಟಿಕೆ ಗಳ ಬಗ್ಗೆ ಠಾಣಾಧಿಕಾರಿಗೆ ಅರಿವಿರಲಿಲ್ಲವೇ? ಒಂದು ವೇಳೆ ಅಕ್ರಮಗಳ ಬಗ್ಗೆ ಗೊತ್ತಿಲ್ಲ ವೆಂದಾದರೆ ಠಾಣಾಧಿಕಾರಿ ತಮ್ಮ ಕರ್ತವ್ಯದಲ್ಲಿ ತಪ್ಪಿದಾರೆ ಯಂತಾಗುವುದಿಲ್ಲವೇ? ಎಂಬ ಪ್ರಶ್ನೆ ಮೂಡುತ್ತದೆ. ಈ ನಿಟ್ಟಿ ನಲ್ಲಿ ಇಲಾಖಾ ತನಿಖೆ ಕೇಂದ್ರೀ ಕೃತವಾಗ ಬಹುದೇ ಎಂಬ ಪ್ರಶ್ನೆ ಮೂಡ ತೊಡಗಿದೆ.
ಸದಾ ಸುದ್ದಿಯಲ್ಲಿರುವ ಮಂಗಳೂರು ಸಿಸಿಬಿ ತಂಡದ ಪೊಲೀಸ್ ಸಿಬ್ಬಂದಿ ಯೊಬ್ಬರ ಅಕ್ರಮ ಬಯಲಾಗಿತ್ತು. ಆಕುರಿತು ತನಿಖೆ ಕೂಡ ನಡೆದಿತ್ತು. ಆದರೆ ವರದಿ ಸಲ್ಲಿಕೆ ಯಾಗಿಲ್ಲ ಎಂಬುದು ಇಲಾಖೆ ಒಳಗಿನ ಸುದ್ದಿ. ಆದರೆ ತಪ್ಪಿತಸ್ತ ಸಿಸಿಬಿ ಪೊಲೀಸ್ ಸಿಬ್ಬಂದಿಗೆ ಶಿಕ್ಷೆ ಯಾಕೆ ಆಗಿಲ್ಲ ಎಂಬುದು ಯಕ್ಷ ಪ್ರಶ್ನೆ ಯಾಗಿದೆ.
ಅದಲ್ಲದೇ ಕೆಲ ದಿನಗಳ ಹಿಂದೆ ಇದೇ ಕದ್ರಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಒಬ್ಬರು ಅನೈತಿಕ ಅಟುವಟಿಕೆಗೆ ಆಹ್ವಾನಿಸಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು . ಪತ್ರಿಕೆ ಹಾಗು ಚಾನೆಲ್ ಗಳಲ್ಲಿ ಭಾರೀ ಸುದ್ದಿ ಮಾಡಿತ್ತು . ಆದರೆ ತಪ್ಪಿತಸ್ತ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆಯತ್ನದ ನಾಟಕ ವಾಡಿ ಕೆಲ ದಿಗಳ ಕಾಲ ಆಸ್ಪತ್ರೆಯಲ್ಲಿ ಕಳೆದು ಬಂದು ಈಗ ಕರ್ತವ್ಯ ದಲ್ಲಿದ್ದಾರೆ. ಆದರೆ ಆ ಪ್ರಕರಣ ಈಗ ಮುಚ್ಚಿ ಹೋಗಿದೆ. ಈ ಎರಡು ಪ್ರಕರಣ ಗಳ ಬಗ್ಗೆ ಪೊಲೀಸ್ ಕಮಿಷನರ್ ಕಣ್ಣು ಹಾಯಿಸ ಬೇಕು ಎಂಬ ಕೂಗು ಇಲಾಖಾ ಸಿಬ್ಬಂದಿಗಳಿಂದಲೇ ಕೇಳಿ ಬರುತ್ತಿದೆ. ಅದಲ್ಲದೇ ಸಿಸಿಬಿ ಪೊಲೀಸ್ ತಂಡ ನಡೆಸುವ ಚಟುವಟಿಕೆಗಳ ಬಗ್ಗೆಯೂ ಪೊಲೀಸ್ ಕಮಿಷನರ್ ಡಾ ಹರ್ಷಾ ಕಣ್ಣಿರಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.