DAKSHINA KANNADA
ಕತಾರ್ ನ “ತುಳು ಜಾತ್ರೆ” ಯಲ್ಲಿ ಮಿಂಚಿದ ಬಿಲ್ಲವಾಸ್ ಕತಾರ್ ನ “ಅಮ್ಮನ ತಮ್ಮನ” ತಂಡ

ಕತಾರ್ – ತುಳು ಕೂಟ ಕತಾರ್” ಆಶ್ರಯದಲ್ಲಿ “ತುಳು ಜಾತ್ರೆ” “ಐಡಿಯಲ್ ಇಂಡಿಯನ್ ಸ್ಕೂಲ್”, ಕತಾರ್ ನ ರಂಗವೇದಿಕೆಯಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ತುಳುವರ ಪಾರಂಪರಿಕ ಪರಿಕಲ್ಪನೆ “ತುಳು ಜಾತ್ರೆ” ಯ ಅಂಗವಾಗಿ ನೃತ್ಯ,ಯಕ್ಷಗಾನ,ಪ್ರತಿಭಾ ಪುರಸ್ಕಾರ, ಜಾನಪದ ಆಟಗಳು ಮತ್ತು ವಿವಿಧ ತುಳು ನಾಡಿನ ತಿನಿಸುಗಳ ಪ್ರದರ್ಶನಗೊಂಡಿತು. ಸಾವಿರಗಟ್ಟಲೆ ಜನರು ಭಾಗವಹಿಸಿ ತಮ್ಮ ಊರಿನ ಜಾತ್ರೆಯ ಆನಂದವನ್ನು ಕತಾರ್ ನ ಮಣ್ಣಿನಲ್ಲಿ ಅನುಭವಿಸಿದರು.
ಬಿಲ್ಲವಾಸ್ ಕತಾರ್ ನ ಅವಿಭಾಜ್ಯ ಅಂಗವಾದ “ಅಮ್ಮನ ತಮ್ಮನ” ತಂಡದವರು ವಿಶೇಷವಾದ ಆಕರ್ಷಣೆಯೊಂದಿಗೆ ಎಲ್ಲರಿಗಿಂತ ವಿಭಿನ್ನವಾಗಿ ತಮ್ಮ ತಿನಿಸಂಗಡಿಯನ್ನು ಅಲಂಕಾರ ಮಾಡಿದ್ದು ಹಾಗೂ ವಿಶೇಷವಾಗಿ ಮನೆಯಲ್ಲಿ ಸಿದ್ದಪಡಿಸಿದ ಅಡುಗೆ ಜನರ ಮನ ತಣಿಸುವುದರೊಂದಿಗೆ ಭಾರೀ ಮನ್ನಣೆಯನ್ನು ಪಡೆಯುವಲ್ಲಿ ಸಾರ್ಥಕವಾಯಿತು.

ತುಳು ಜಾತ್ರೆಯಲ್ಲಿ ಪ್ರತೀ ಭಾರಿ ವಿಭಿನ್ನ ರೀತಿಯಲ್ಲಿ ಕಂಗೊಳಿಸುವ “ಅಮ್ಮನ ತಮ್ಮನ” ತಂಡದ ಇದು ಮೂರನೆಯ ವರ್ಷದ ಪ್ರದರ್ಶನವಾಗಿದೆ ಎನ್ನುವುದು ಉಲ್ಲೇಖನೀಯ. ಈ ಭಾರಿಯ ರುಚಿ ರುಚಿ ಅಡುಗೆ ಮತ್ತು ತಂಡದ ಸರ್ವಾಂಗೀಣ ಪ್ರದರ್ಶನಕ್ಕೆ ಮನ ಸೋತ ತುಳು ಕೂಟ ಕತಾರ್, “ಅಮ್ಮನ ತಮ್ಮನ” ತಂಡದವರನ್ನು ಅತ್ಯುತ್ತಮ ತಂಡವೆಂದು ಘೋಷಿಸಿ ಪ್ರಶಸ್ತಿಯನ್ನಿತ್ತು ಮನ್ನಿಸಿತು. “ಅಮ್ಮನ ತಮ್ಮನ” ತಂಡದವರ ಪರಿಶ್ರಮಕ್ಕೆ ಸಂದ ಸಮಯೋಚಿತ ಗೌರವವಾಗಿದೆ.