Connect with us

    LATEST NEWS

    ಉಡುಪಿ – ಬೈಕ್ ನಲ್ಲಿ ಬೆಚ್ಚಗೆ ಕುಳಿತ ಹೆಬ್ಬಾವಿನ ಮರಿ ರಕ್ಷಣೆ

    ಉಡುಪಿ, ಜುಲೈ.03: ಬೈಕ್ ನ ಹೆಡ್ ಲೈಟ್ ನ ವೈಸರ್ ನಲ್ಲಿ ಹೆಬ್ಬಾವಿನ ಮರಿವೊಂದು ಸಿಕ್ಕಿಹಾಕಿಕೊಂಡ ಘಟನೆ ಉಡುಪಿಯ ಕಿನ್ನಿಮುಲ್ಕಿ ಬಳಿಯ ಪೆಟ್ರೋಲ್ ಬಂಕ್ ಬಳಿ ನಡೆದಿದೆ.


    ಕಿನ್ನಿಮುಲ್ಕಿ ಬಳಿಯ ಪೆಟ್ರೋಲ್ ಬಳಿ ಬೈಕ್ ನಿಲ್ಲಿಸಿ ಯುವಕ ಕೆಲಸಕ್ಕೆ ತೆರಳಿದ್ದ. ಸಂಜೆ ಕೆಲಸ ಮುಗಿಸಿ ಮನೆಗೆ ತೆರಳಲು ಬೈಕ್ ಏರಿದ ಯುವಕ ಬೈಕ್ ಸ್ಟಾರ್ಟ್ ಮಾಡಿ ಹೊರಡಬೇಕು ಎನ್ನುವಾಗ ಹಾವು ಪ್ರತ್ಯಕ್ಷವಾಗಿದೆ. ಹೆಡ್ ಲೈಟ್ ವೈಸರ್‌ನಲ್ಲಿ ಹಾವು ನೋಡಿ ಬೆಚ್ಚಿಬಿದ್ದ ಯುವಕ ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಉರಗ ರಕ್ಷಕ ಪ್ರಾಣೇಶ್ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಹಾವಿನ ರಕ್ಷಣೆ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಅಷ್ಟೇ, ಮೊಟ್ಟೆಯಿಂದ ಹೊರಬಂದಿದ್ದ ಹೆಬ್ಬಾವು ಮರಿ ಇದಾಗಿದೆ. ಮಳೆಗಾಲದ ಸಮಯದಲ್ಲಿ ಬಿಸಿ ಜಾಗ ಹುಡುಕಿ ಬೈಕ್ ಹೆಡ್ ವೈಸರ್ ಸೇರಿದ್ದ ಹೆಬ್ಬಾವು ಮರಿಯನ್ನು ಹತ್ತಿರದ ರಕ್ಷಿತಾರಣ್ಯಕ್ಕೆ ಬಿಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply