DAKSHINA KANNADA
ಪುತ್ತೂರಿನ ಪರ್ಲಡ್ಕದ ಯುವಕ ನಾಪತ್ತೆ-ಪುತ್ತೂರು ನಗರ ಠಾಣೆಯಲ್ಲಿ ದೂರು.
ಪುತ್ತೂರು ಡಿಸೆಂಬರ್ 02: ಯುವಕನೋರ್ವ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ರಾಜಸ್ಥಾನ ನಿವಾಸಿಯಾಗಿದ್ದು ಪ್ರಸ್ತುತ ಪರ್ಲಡ್ಕದಲ್ಲಿ ವಾಸ್ತವ್ಯವಿರುವ ರತನ್ ಸಿಂಗ್‌ರವರ ಪುತ್ರ ಲೋಕೇಂದರ್ ಸಿಂಗ್(22ವ.) ನಾಪತ್ತೆಯಾದ ಯುವಕ. ಬಿಬಿಎ ಪದವಿ ಪಡೆದಿರುವ ಲೋಕೇಂದರ್ ಸಿಂಗ್ ಕಳೆದ ಎರಡು ತಿಂಗಳ ಹಿಂದೆ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ನವೆಂಬರ್ 30ರಂದು ಎಂದಿನಂತೆ ಮನೆಯಲ್ಲಿ ಊಟ ಮಾಡಿ ಟಿವಿ ನೋಡಿಕೊಂಡಿದ್ದ. ಬೆಳಿಗ್ಗೆ ನೋಡುವಾಗ ಆತ ಮನೆಯಲ್ಲಿಲ್ಲದೆ ನಾಪತ್ತೆಯಾಗಿದ್ದಾನೆ. ಆತನ ಉಡುಪುಗಳು ತುಂಬಿದ್ದ ಬ್ಯಾಗ್, ದಾಖಲೆ ಪತ್ರಗಳು ಹಾಗೂ ಪಾಸ್‌ಪೋರ್ಟ್ ಸಹಿತ ಆತ ನಾಪತ್ತೆಯಾಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಲೋಕೇಂದರ್ ಸಿಂಗ್ ತಂದೆ ರತನ್ ಸಿಂಗ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವಕ ಸುಮಾರು 6 ಅಡಿ ಉದ್ದ, ಗೋದಿ ಮೈಬಣ್ಣ, ಉದ್ದನೆಯ ಕೂದಲು, ಗಡ್ಡಮೀಸೆ ಹೊಂದಿದ್ದು ಕನ್ನಡಕ ಧರಿಸಿರುತ್ತಾನೆ. ಕನ್ನಡ, ಹಿಂದಿ, ಇಂಗ್ಲಿಷ್, ಮಾರ್ವಾಡಿ ಭಾಷೆ ಬಲ್ಲವನಾಗಿದ್ದು ಆತನ ಗುರುತು ಪತ್ತೆಯಾದಲ್ಲಿ ನಗರ ಠಾಣೆಗೆ ಮಾಹಿತಿ ನೀಡುಂತೆ ಪೊಲೀಸ್ ಠಾಣೆಯ ಪ್ರಕಟಣೆ ತಿಳಿಸಿದೆ.