DAKSHINA KANNADA
ಕಲ್ಲೇಗ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ ಮಾಲಕ ವಿಶ್ವಾಸ್ ಆತ್ಮಹತ್ಯೆಗೆ ಶರಣು

ಪುತ್ತೂರು ಜುಲೈ 28: ವಿವಾಹಿತ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮೃತರನ್ನು ನೆಹರೂ ನಗರದ ಕಲ್ಲೇಗ ಶ್ರೀ ಸಾಯಿ ವೆಲ್ಡಿಂಗ್ ವರ್ಕ್ಸ ಮಾಲಕ ವಿಶ್ವಾಸ್ (37) ಎಂದು ಗುರುತಿಸಲಾಗಿದೆ. ಅವರು ಜುಲೈ 28ರಂದು ತನ್ನ ವೆಲ್ಲಿಂಗ್ ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ವಿಶ್ವಾಸ್ ಅವರ ಪತ್ನಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಅಂಗನವಾಡಿಯಿಂದ ತನ್ನ ಕೆಲಸ ಮುಗಿಸಿ ಮನೆಗೆ ಸಂಜೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕಲ್ಲೇಗ ಗಣೇಶ್ ಬಾಗ್ ನಿವಾಸಿ ಆಗಿರುವ ಅವರು ಮನೆ ಸಮೀಪದಲ್ಲೇ ಉದ್ಯಮ ನಡೆಸುತ್ತಿದ್ದರು. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
