Connect with us

DAKSHINA KANNADA

ಪುತ್ತೂರು: ಮಹಿಳೆಯ ಮೇಲೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ

ಪುತ್ತೂರು, ಸೆಪ್ಟೆಂಬರ್ 14: ಪುತ್ತೂರಿನ ತಿಂಗಳಾಡಿ ಎಂಬಲ್ಲಿ ಮಹಿಳೆಯ ಮೇಲೆ ಅನ್ಯಕೋಮಿನ ಯುವಕ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ.

ದಿನಸಿ ಅಂಗಡಿಗೆ ಬಂದಿದ್ದ ಮಹಿಳೆಯ ಮೇಲೆ ಅನ್ಯಕೋಮಿನ ಯುವಕ ಕೈಹಾಕಿ ಕಿರುಕುಳ ನೀಡಿದ್ದು, ಈ ಸಂದರ್ಭ ಮಹಿಳೆ ಬೊಬ್ಬೆ ಹಾಕಿದಾಗ ಯುವಕ ಪರಾರಿಯಾಗಿದ್ದಾನೆ. ಓಲೆಮುಂಡೋವು ನಿವಾಸಿ ಬದ್ರುದ್ಧೀನ್ ಎಂಬಾತ ಈ ಕೃತ್ಯ ವೆಸಗಿದ್ದು, ಆರೋಪಿಯನ್ನು ಬಂಧಿಸುವಂತೆ ಹಿಂದೂ ಸಂಘಟನೆಗಳ ಒತ್ತಾಯಿಸಿದೆ.

ನಾಳೆ ಬೆಳಿಗ್ಗೆ ಒಳಗೆ ಬಂಧಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿದೆ ಆರೋಪಿಯನ್ನು ಬಂಧಿಸುವಂತೆ ಪೋಲೀಸರಿಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ಸೂಚಿನೆ ನೀಡಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *