Connect with us

    DAKSHINA KANNADA

    ಪುತ್ತೂರಿನ “ವಿಷನ್ ಸೇವಾ ಟ್ರಸ್ಟ್ ” ನಿಂದ ನವೆಂಬರ್ ತಿಂಗಳ “ಒಳಿತು ಮಾಡು ಮನುಷ್ಯ” ಕಾರ್ಯಕ್ರಮ

    ಪುತ್ತೂರು: ಇಲ್ಲಿನ ವಿಷನ್ ಸಹಾಯ ನಿಧಿ ಸೇವಾ ಟ್ರಸ್ಟ್ ನ ಮಹತ್ವ ಪೂರ್ಣ ಯೋಜನೆಯಾದ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ ಮತ್ತು ಆಸಕ್ತರಿಗೆ ನಿರಂತರವಾಗಿ ದಾನಿಗಳ ಸಹಕಾರದಿಂದ ಪ್ರತಿ ತಿಂಗಳು ದಿನಸಿ ಸಾಮಗ್ರಿಗಳ ಕಿಟ್ ನೀಡುವ ಮಾಸಿಕ ಯೋಜನೆ “ಒಳಿತು ಮಾಡು ಮನುಷ್ಯ”,ಇದರ ನವೆಂಬರ್ ತಿಂಗಳ ಕಾರ್ಯಕ್ರಮವು ನವೆಂಬರ್ 29ರಂದು ಪುತ್ತೂರಿನ ರೋಟರಿ GL ಸಭಾಭವನ ರೂಫ್ ಟಾಪ್ ಹಾಲ್ನಲ್ಲಿ ನಡೆಯಿತು.


    ಈ ಕಾರ್ಯಕ್ರಮ ದಲ್ಲಿ 48 ಬಡ ರೋಗಿಗಳಿಗೆ 1,000 ರೂಪಾಯಿ ಯಾ ಫುಡ್ ಕಿಟ್ ನ್ನು ನೀಡಲಾಯಿತು. ಹಾಗೂ ಮರದಿಂದ ಬಿದ್ದು ಬೆನ್ನು ಮೂಳೆ ಮುರಿತ ಕೊಳಕ್ಕಾದ ಪುತ್ತೂರು ತಾಲೂಕು ನಗರ ಸಭಾ ವ್ಯಾಪ್ತಿಯ ಕರ್ಕುಂಜ ನಿವಾಸಿ ಶ್ರೀ ಹರಿಶ್ಚಂದ್ರ ರಿಗೆ ರೂ 5,000ದ ಚೆಕ್ ಮತ್ತು ಫುಡ್ ಕಿಟ್ ನ್ನೂ ವಿತರಣೆ,ಮರದಿಂದ ಬಿದ್ದು ಬೆನ್ನು ಮೂಳೆ ಮುರಿತ ಗೊಂಡು ಮಲಗಿದ್ದಲ್ಲೆ ಇರುವ ತೆಕ್ಕಡ್ಕ ಮನೆ ಕೊಡಿಂಬಾಳ ಕಡಬ ದ ಆನಂದ ರಿಗೇ ರೂ.5,000ದ ಚೆಕ್ ಮತ್ತು ಫುಡ್ ಕಿಟ್ ವಿತರಣೆ,ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮುರದಾಚಡವು ಮನೆ ಕೋಡಿಂ ಬಾಳ ಕಡಬ ದ ವೇದಾವತಿ ಯವರಿಗೆ ರೂ 5,000ದ ಚೆಕ್ ಮತ್ತು ಫುಡ್ ಕಿಟ್ ವಿತರಣೆ ಹಾಗೂ ತುರ್ತು ಯೋಜನೆಯಾಗಿ ಕಿಡ್ನಿ ವೈಫಲ್ಯ ಧಿಂದ ಬಳಲುತ್ತಿರುವ ಅರ್ಲ ನೆಲ್ಯಾಡಿ ಯ ಸುರೇಶ್ ರವರಿಗೆ 1,500 ನಗದು ಮತ್ತು ಫುಡ್ ಕಿಟ್ ನ್ನೂ ವಿತರಿಸಲಾಯಿತು.


    ಸಂದರ್ಭದಲ್ಲಿ ಟ್ರಸ್ಟ್ ನ ದಾನಿ ಯದ ರಾಮಚಂದ್ರ ಭಟ್ ಮಡ್ಯ0ಗಳ, ಗೌರವ ಸಲಹೆಗಾರರಾದ ಪ್ಯಾಟ್ರಿಕ್ ಚಿಪ್ರಿಯನ್ ಮಸ್ಕರೇನಸ್,ಕಲಾವಿದ ಕೃಷ್ಟಪ್ಪ ಶಿವನಗರ,ಮಹಮ್ಮದ್ ಬಶೀರ್,ಗೌರವಾದ್ಯಕ್ಷರದ ಶರತ್ ಕುಮಾರ್, ಸಂಚಾಲಕರಾದ ದಿಲೀಪ್ ಕುಮಾರ್,ಅಧ್ಯಕ್ಷರಾದ ಚೇತನ್ ಕುಮಾರ್ ಪುತ್ತೂರು,ಕಾರ್ಯದರ್ಶಿ ಮೋಹನ ಸಿಂಹವನ, ಖಜಾಂಚಿ ಶೋಭಾ,ಉಪಾಧ್ಯಕ್ಷರಾದ ಸ್ವಾತಿ, ಜ್ಯೋತೆ ಕಾರ್ಯದರ್ಶಿ ಸರಸ್ವತಿ,ಝೋಥೆ ಕಾರ್ಯದರ್ಶಿ ಸೀತಾ,ಸಂಘಟನೆ ಕಾರ್ಯದರ್ಶಿ ಗೀತಾಂಜಲಿ ಮತ್ತುಸದಸ್ಯರದ ಮುನ್ನ ಹಾಜರಿದ್ದರು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಉಚಿತವಾಗಿ ಸಭಾಂಗಣವನ್ನು ನೀಡಿದ್ದರು.ನಿರೂಪಣೆಯನ್ನು ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ನಿರ್ವಹಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *