DAKSHINA KANNADA
ಪುತ್ತೂರು : ತಿರುಪತಿ ಲಡ್ಡು ವಿವಾದ, ವಿಶೇಷ ತನಿಖೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ..!
ಪುತ್ತೂರು : ತಿರುಪತಿ ಲಡ್ಡು ವಿವಾದ ಕುರಿತು ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರ ಮೇಲೆ ವಿಶೇಷ ತನಿಖೆ ನಡೆಸಲು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.
ಪುತ್ತೂರಿನಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ತಿರುಪತಿ ದೇವಸ್ಥಾನದ ಲಡ್ಡು ಸಿದ್ಧಪಡಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಯ ಕೊಬ್ಬು ಪತ್ತೆಯಾಗಿರುವುದಕ್ಕೆ ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸುತ್ತದೆ. ತಿರುಪತಿ ದೇವಸ್ಥಾನ ಹಿಂದೂಗಳ ಒಂದು ಶ್ರದ್ಧಾ ಕೇಂದ್ರ. ಇಲ್ಲಿ ಪ್ರಸಾದ ರೂಪದಲ್ಲಿ ಸಿಗುವಂತ ಲಡ್ಡು ಅತ್ಯಂತ ಮಹತ್ವಪೂರ್ಣವಾದದ್ದು. ಹೀಗಿರುವಾಗ ಪವಿತ್ರವಾದ ಲಡ್ಡು ಪ್ರಸಾದವನ್ನ ಅಪವಿತ್ರಗೊಳಿಸಿದ್ದಂತಹ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ಇದನ್ನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಖಂಡಿಸುತ್ತದೆ. ಧಾರ್ಮಿಕ ಭಾವನೆಗೆ ದಕ್ಕೆ ತರುವಂತ ಕೆಲಸ ಮಾಡಿರುವಂತ ಜಗನ್ ಮೋಹನ್ ರೆಡ್ಡಿ ನೇತೃತ್ವದ ಹಿಂದಿನ ಸರ್ಕಾರದ ಧೋರಣೆಯನ್ನ ಅವರು ಖಂಡಿಸಿದ್ರು. ಸದ್ಯ ತಿರುಪತಿಯ ಪ್ರಕರಣವನ್ನ ಬೆಳಕಿಗೆ ತಂದ ಈಗಿನ ಚಂದ್ರುಬಾಬು ನಾಯ್ಡು ನೇತೃತ್ವದ ಸರ್ಕಾರವನ್ನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಶ್ಲಾಘಿಸುತ್ತದೆ. ಜೊತೆಗೆ ವಿಶೇಷ ತನಿಖೆ ಮಾಡಿ ಇದರ ಹಿಂದಿರುವ ಕಾಣದ ಕೈಗಳನ್ನ ಹಿಡಿದು ಕಾನೂನು ರೀತಿಯಲ್ಲಿ ಶಿಕ್ಷಿಸಬೇಕು ಎಂದು ಅವರು ಒತ್ತಾಯಿಸಿದರು.