Connect with us

    DAKSHINA KANNADA

    ಪುತ್ತೂರು : ಈ ಪ್ರದೇಶದಲ್ಲಿ ‘ಬ್ರಹ್ಮ ರಾಕ್ಷಸ’ ಇದ್ದಾನೆ ; ಜಾಲಾ ತಾಣಗಳಲ್ಲಿ ವೈರಲ್ ಫೇಕ್ ಘೋಸ್ಟ್…!

    ಪುತ್ತೂರು : ಕಾರು ಚಾಲಕನೊಬ್ಬ ರಾತ್ತಿ ವೇಳೆ ಸಂಚರಿಸುವಾಗ ನೋಡಿದ ಬ್ರಹ್ಮ ರಾಕ್ಷಸ ಹಾದು ಹೋದ ದೃಶ್ಯ ಎಂದು ಹೇಳಿ ತನಗಾದ ಭಯಾನಕ ಅನುಭವವನ್ನು ವಿವರಿಸುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಬ್ರಹ್ಮರಕ್ಕಸ ಹಾದು ಹೋದದ್ದು ಎಂದು ಬಿಂಬಿಸುವ ಫೋಟೋ ಒಂದನ್ನು ಶೇರ್ ಮಾಡಿ ಇದು ಅಜಿಲಮೊಗರು ದರ್ಗಾಕ್ಕೆ ರಾತ್ರಿ ವೇಳೆ ಹೋಗುವಾಗ ಉಂಟಾದ ಘಟನೆ ಯಾರೂ ಕೂಡಾ ಆ ರಸ್ತೆಯಲ್ಲಿ ಹೋಗಬೇಡಿ ಎಂದು ಎಚ್ಚರಿಸುವ ಫೇಕ್ ಸುದ್ದಿಯೊಂದು ಕಳೆದ ಕೆಲ ದಿನಗಳಿಂದ ಗ್ರಾಮೀಣ ಭಾಗದ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
    ಅಸಲಿಯತ್ತು ಏನು ?
    ಇತಿಹಾಸ ಪ್ರಸಿದ್ಧ ಅಜಿಲಮೊಗರು ಮಾಲಿದಾ ಉರೂಸು ವಿಜ್ರಂಭಣೆಯಿಂದ ಆರಂಭವಾಗಿ ಕಳೆದ ವಾರವಷ್ಟೇ ಸಮಾಪ್ತಿಗೊಂಡಿದೆ. ಉರೂಸು ಕಾರ್ಯಕ್ರಮ ಮುಗಿದರೂ ಜನರು ಝಿಯಾರತ್ ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿರುವುದು ಕಂಡುಬಂದಿದೆ, ಅಜಿಲಮೊಗರು ದರ್ಗಾಕ್ಕೆ ಹೋಗಲು ಬಿಸಿರೋಡ್ ಬಂಟ್ವಾಳ ಮಣಿಹಳ್ಳ ಮಾರ್ಗವಾಗಿ, ಉಪ್ಪಿನಂಗಡಿ ಬಾಜಾರ ಸರಳಿಕಟ್ಟೆ ಮಾರ್ಗವಾಗಿ, ಮಾಣಿ ಗಡಿಯಾರ ಕಡೇಶ್ವಾಲ್ಯ ಮಾರ್ಗವಾಗಿ ದೋಣಿಯ ಮೂಲಕ, ಮತ್ತು ಈ ಬಾರಿ ಪೆರ್ನೆ ಜಂಕ್ಷನ್ ನಿಂದ ಡ್ಯಾಂ ರಸ್ತೆಯಲ್ಲಿ ತೆಕ್ಕಾರು ಮೂಡಡ್ಕ ಸಂಪರ್ಕಿಸುವ ರಸ್ತೆಯಲ್ಲಿ ಹೋಗುವ ವ್ಯವಸ್ಥೆ ಇತ್ತು, ಪೆರ್ನೆಯಿಂದ ಡ್ಯಾಂ ರಸ್ತೆಯ ಮೂಲಕ ರಾತ್ರಿ ವೇಳೆ ಹೋಗುವವರಿಗೆ ಸ್ವಲ್ಪ ಇಕ್ಕಟ್ಟಾದ ಭಯಮೂಡಿಸುವಂತಹಾ ಒಳರಸ್ತೆಯಲ್ಲಿ ಹೋಗಬೇಕಾದ ಪರಿಸ್ಥಿತಿ ಇತ್ತು ಎಂದು ಹೆಳಲಾಗಿದೆ. ಅದನ್ನೇ ಮತ್ತಷ್ಟು ಭಯ ಹೆಚ್ಚಿಸಲು ವಿಘ್ನ ಸಂತೋಷಿಗಳು ವಾಯಿಸ್ ಕ್ರಿಯೇಟ್ ಮಾಡಿ ಯೂಟ್ಯೂಬ್ ಚಾನೆಲ್ ಒಂದರ Ghost ವಿಡಿಯೋದಿಂದ ಫೋಟೋ ಸ್ಕ್ರೀನ್‌ ಶಾಟ್ ಮಾಡಿ ಹಾಕಿ ಸಾಮಾಜಿಕ ತಾಣದಲ್ಲಿ ವೈರಲ್ ಮಾಡಿ ವಿಕೃತ ಆನಂದ ಪಡುತ್ತಿದ್ದಾರೆ. ಇದನ್ನು ನೋಡಿದ ಜನ ಕೂಡ ಹಿಂದೆ ಮುಂದೆ ವಿಚಾರಿಸದೆ ಫಾರ್ವಡ್ ಮಾಡುತ್ತಿದ್ದಾರೆ. ಈ ವಿಘ್ನ ಸಂತೋಷಿಗಳು ಹರಡುವ ಫೇಕ್ ಘೋಸ್ಟ್ ಸಂದೇಶದಿಂದಾಗಿ ಗ್ರಾಮೀಣ ಭಾಗದ ಜನ ರಾತ್ರಿ ವೇಳೆ ಒಳ ರಸ್ತೆಗಳಲ್ಲಿ ಸಂಚರಿಸಲು ಭಯಪಡುವಂತಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *