DAKSHINA KANNADA
ಪುತ್ತೂರು ತಾಲೂಕು ಪತ್ರಕರ್ತರ ಸಂಘವನ್ನು ಬಲಿಷ್ಠವಾಗಿ ಕಟ್ಟುತ್ತೇವೆ- ಒಬ್ಬನ ಕಿತಾಪತಿಗೆ ಎಲ್ಲರ ಮೇಲೂ ಯಾಕೆ ಹಗೆತನ ? : ಅಧ್ಯಕ್ಷ ಐ.ಬಿ. ಸಂದೀಪ್ ಕುಮಾರ್
ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಐ.ಬಿ. ಸಂದೀಪ್ ಕುಮಾರ್ ಜತೆ ಚಿಟ್ ಚಾಟ್.
1. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ ಅಭಿನಂದನೆಗಳು. ಹಲವು ಸಮಯದ ಗೊಂದಲದ ಪರಿಹಾರ ಹೇಗೆ…?
ಸಂದೀಪ್: ಒಬ್ಬ ವ್ಯಕ್ತಿಯಿಂದಾಗಿ ಸ್ವಲ್ಪ ಗೊಂದಲ ಉಂಟಾಗಿತ್ತು. ಈಗ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ 25 ವರ್ಷ. ನಮ್ಮ ಸಂಘ ಯಾವುದೇ ಸಂಘಗಳೊಂದಿಗೆ ಮರ್ಜ್ ಆಗಿಲ್ಲ. ನಮ್ಮದು ಸ್ವತಂತ್ರ ಸಂಸ್ಥೆ. ಪ್ರಾಮಾಣಿಕ ಪತ್ರಕರ್ತರನ್ನು ಸೇರಿಸಿಕೊಂಡು ಸಂಘವನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ನಮ್ಮ ಉದ್ದೇಶ.
2. ಹಣ ದುರುಪಯೋಗದ ಆರೋಪದ ಬಗ್ಗೆ..
ಸಂದೀಪ್: ಕೋತಿ ಬೆಣ್ಣೆ ತಿಂದು ಮೇಕೆ ಬಾಯಿಗೆ ಒರೆಸಿದಂತೆ ಈ ಆರೋಪ. ಸಂಘದ ಅಧ್ಯಕ್ಷನಾಗಿದ್ದವನೊಬ್ಬ ಮಾಡಿದ ಕಿತಾಪತಿ ಇದು. ಸಂಘವನ್ನು ಒಡೆಯಲು ಬಯಸಿದ್ದ ಲೋಕಲ್ ಪತ್ರಿಕೆಯ ಒಬ್ಬನೊಂದಿಗೆ ಸೇರಿಕೊಂಡು ಈತ ಮಾಡಿದ ಕುತಂತ್ರವಿದು. ಸಂಘದ ಕಚೇರಿಯನ್ನು ಸುಂದರಗೊಳಿಸುವ ಸಂದರ್ಭ ಸಮರ್ಪಕ ಲೆಕ್ಕಾಚಾರ ನೀಡಿಲ್ಲ. ಮುಂದೆ ಈ ವ್ಯಕ್ತಿಯ ವಿರುದ್ಧ ಕಾನೂನುಕ್ರಮ ಕೈಗೊಳ್ಳಲಿದ್ದೇವೆ.
3. ಸಂಘ ಬಲಿಷ್ಠಗೊಳಿಸುವ ಬಗ್ಗೆ ವಿವರಿಸಿ.
ಸಂದೀಪ್ : ಮಾಧ್ಯಮ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಪ್ರಾಮಾಣಿಕ ಪತ್ರಕರ್ತರನ್ನು ಜತೆಯಾಗಿ ಒಯ್ಯುವ ಇಚ್ಛೆ ನಮ್ಮದು. ದಿನಪತ್ರಿಕೆ, ವಾರಪತ್ರಿಕೆ, ವೆಬ್‌ಸೈಟ್, ಚಾನೆಲ್, ಲೋಕಲ್ ಪತ್ರಿಕೆ ಹೀಗೆ ಎಲ್ಲರೂ ಸೇರಿ ಮುನ್ನಡೆಯುವ ಚಿಂತನೆ ನಮ್ಮದು.
4. ಅಂದರೆ ಸಂಘದ ಹೆಸರಿಗೆ ಮಸಿ ಬಳಿದವರಿಗೂ ಅವಕಾಶವೇ..?
ಸಂದೀಪ್: ಖಂಡಿತಾ ಇಲ್ಲ. 25ವರ್ಷಗಳಿಂದ ನಮ್ಮ ಸಂಘ ಜಿಲ್ಲೆಯಲ್ಲಿಯೇ ಉತ್ತಮ ಸಂಘ ಎಂದು ಖ್ಯಾತಿ ಪಡೆದಿದೆ. ಅಧ್ಯಕ್ಷನಾಗಿದ್ದ ಒಬ್ಬನ ಕ್ಷುಲ್ಲಕ ಮಾನಸಿಕತೆಯಿಂದ ಸಂಘದ ಬಗ್ಗೆ ಅಪಪ್ರಚಾರ ನಡೆಸುವ ಕಾರ್ಯ ನಡೆಯಿತು. ಸಂಘದ ಗೌರವಾನ್ವಿತ ಸದಸ್ಯರ ಬಗ್ಗೆ ಲೋಕಲ್ ಪತ್ರಿಕೆಯಲ್ಲಿ ಬರೆಯಿಸುವ ಕೀಳುಮಟ್ಟದ ವ್ಯವಸ್ಥೆ ಆಗಿತ್ತು. ಇದರಲ್ಲಿ ಯಾವುದೇ ಹುರುಳಿಲ್ಲ ಎಂಬುದು ಪುತ್ತೂರಿನ ಎಲ್ಲರಿಗೂ ತಿಳಿದಿದೆ. ಸಂಘದ ಹೆಸರಿಗೆ ಮಸಿ ಬಳಿದ ಪತ್ರಕರ್ತರಿಗೆ ನಮ್ಮ ಸಂಘದಲ್ಲಿ ಖಂಡಿತಾ ಜಾಗ ಇಲ್ಲ. ಈತನ ದುರ್ಬೋಧನೆಗೆ ಒಳಗಾಗಿ ಕೆಲವರು ಸಹಕರಿಸಿರುವುದು ಕಂಡು ಬಂದಿದೆ. ಅಂತವರು ಲಿಖಿತ ಕ್ಷಮಾಪನೆ ನೀಡಿದರೆ ಪರಿಶೀಲಿಸಲಾಗುವುದು.
5. ರಾಜ್ಯ ಸಂಘದ ಮಾತುಕತೆ ಏನಾಯಿತು?
ಸಂದೀಪ್: ನಾನು ಮೊದಲೇ ಹೇಳಿದಂತೆ ನಮ್ಮದು ರಾಜ್ಯ ಸಂಘ ಹುಟ್ಟುವ ಮೊದಲೇ ಹುಟ್ಟಿದ ಸ್ವತಂತ್ರ ಸಂಸ್ಥೆ. ಪುತ್ತೂರು ತಾಲೂಕು ಪತ್ರಕರ್ತರ `ತರವಾಡು ಮನೆ’ ನಮ್ಮ ಸಂಘ. ನಮ್ಮ ಸಂಘದ ಕೆಲವರಿಗೆ ರಾಜ್ಯ ಸಂಘವು ಸದಸ್ಯತ್ವ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ಬಂದಾಗ ಅವರಿಗೆ ಗೌರವಕೊಡುವ ಕೆಲಸ ಮಾಡಿದ್ದೇವೆ. ಜಿಲ್ಲಾ ಸಂಘದವರು ಬಂದಾಗಲೂ ಅವರಿಗೆ ಗೌರವ ನೀಡಿದ್ದೇವೆ. ಈ ಮಾತುಕತೆ ಕೇವಲ ಔಪಚಾರಿಕತೆಯ ಚೌಕಟ್ಟನ್ನು ಮಾತ್ರ ಹೊಂದಿದೆ.
6. ನಿಮ್ಮ ಸಂಘದ ಬಗ್ಗೆ ಅಪಪ್ರಚಾರ ಮಾಡಿದ ಲೋಕಲ್ ಪತ್ರಿಕೆಯ ಪತ್ರಕರ್ತರನ್ನೂ ಕ್ಷಮಿಸುತ್ತೀರಾ?
ಸಂದೀಪ್: ಹೌದು. ಆ ಪತ್ರಿಕೆಯಲ್ಲಿ ತುಂಬಾ ಮಂದಿ ಪ್ರಾಮಾಣಿಕ ಪತ್ರಕರ್ತರಿದ್ದಾರೆ. ಹಿಂದೆ ನಮ್ಮ ಸಂಘದಲ್ಲಿದ್ದುಕೊಂಡು ಅವರೆಲ್ಲಾ ಕೆಲಸ ಮಾಡಿದ್ದಾರೆ. ಅವರ ಬಗ್ಗೆ ನಮಗೆ ಒಂದಿನಿತೂ ಬೇಸರವಿಲ್ಲ. ಒಬ್ಬ ಮಾತ್ರ ನಮ್ಮ ಸಂಘವನ್ನು ಒಡೆದು ಆಟ ನೋಡುವ ಉದ್ದೇಶದಿಂದ ಕುಳಿತು ಏನೇನೋ ಬರೆದ ಅಂತಾ ಉಳಿದವರನ್ನೂ ಅದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ಒಬ್ಬನ ಕಿತಾಪತಿಗೆ ಎಲ್ಲರ ಮೇಲೂ ಯಾಗೆ ಹಗೆತನ?
7. ರಾಜ್ಯ ಸಂಘದ ಮಾತುಕತೆ ಏನಾಯಿತು?
ಸಂದೀಪ್: ನಾನು ಮೊದಲೇ ಹೇಳಿದಂತೆ ನಮ್ಮದು ರಾಜ್ಯ ಸಂಘ ಹುಟ್ಟುವ ಮೊದಲೇ ಹುಟ್ಟಿದ ಸ್ವತಂತ್ರ ಸಂಸ್ಥೆ. ಪುತ್ತೂರು ತಾಲೂಕು ಪತ್ರಕರ್ತರ `ತರವಾಡು ಮನೆ’ ನಮ್ಮ ಸಂಘ. ನಮ್ಮ ಸಂಘದ ಕೆಲವರಿಗೆ ರಾಜ್ಯ ಸಂಘವು ಸದಸ್ಯತ್ವ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ಬಂದಾಗ ಅವರಿಗೆ ಗೌರವಕೊಡುವ ಕೆಲಸ ಮಾಡಿದ್ದೇವೆ. ಜಿಲ್ಲಾ ಸಂಘದವರು ಬಂದಾಗಲೂ ಅವರಿಗೆ ಗೌರವ ನೀಡಿದ್ದೇವೆ. ಈ ಮಾತುಕತೆ ಕೇವಲ ಔಪಚಾರಿಕತೆಯ ಚೌಕಟ್ಟನ್ನು ಮಾತ್ರ ಹೊಂದಿದೆ.