DAKSHINA KANNADA
ಪುತ್ತೂರು – ಪೋಕರಿ ವಿಧ್ಯಾರ್ಥಿ ವಿರುದ್ದ ಶಾಲೆಯಲ್ಲಿ ಪೋಷಕರ ಪ್ರತಿಭಟನೆ
ಪುತ್ತೂರು ಡಿಸೆಂಬರ್ 11: ಶಾಲೆಯಲ್ಲಿ ಕಿಟಲೆ, ತುಂಟಾಟ ಮಾಡಿ ತನ್ನ ಸಹಪಾಠಿಗಳಿಗೆ ತೊಂದರೆ ಕೊಡುತ್ತಿದ್ದಾನೆ ಎಂದು ಆರೋಪಿಸಿ ವಿಧ್ಯಾರ್ಥಿಗಳ ಪೋಷಕರು ವಿಧ್ಯಾರ್ಥಿಯೊಬ್ಬನ ಮೇಲೆ ಶಾಲೆಯಲ್ಲಿ ಪ್ರತಿಭಟಿಸಿದ ಘಟನೆ ಪುತ್ತೂರಿನ ಮೇನಾಲ ಶಾಲೆಯಲ್ಲಿ ನಡೆದಿದೆ.
ಮೇನಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಿಯುತ್ತಿರುವ 6ನೇ ತರಗತಿ ವಿಧ್ಯಾರ್ಥಿ ತನ್ನ ತುಂಟಾಟ, ಕೀಟಲೆ, ಪೋಕರಿತನದಿಂದ ಶಾಲೆಯಲ್ಲಿ ಕುಖ್ಯಾತಿ ಪಡೆದಿದ್ದ ಅಲ್ಲದೆ ನಿಷೇಧಿತ ವಸ್ತುಗಳನ್ನು ಸೇವಿಸಿ ಶಾಲೆಗೆ ಬಂದು ಇತರ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ತೊಂದರೆ ಕೊಡುತ್ತಿರುವುದಾಗಿ ಆರೋಪಿಸಿರುವ ಮಕ್ಕಳ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಸ್ತುತ ಶಾಲೆಯಲ್ಲಿ 123 ವಿದ್ಯಾರ್ಥಿಗಳಿದ್ದು ಎಲ್ಲಾ ವಿದ್ಯಾರ್ಥಿಗಳ ಹೆತ್ತವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಪೋಕರಿ ವಿದ್ಯಾರ್ಥಿಯನ್ನು ಡಿಬಾರ್ ಮಾಡುವಂತೆ ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ತಮ್ಮ ಮಕ್ಕಳನ್ನು ಶಾಲೆಯಿಂದ ಕರೆದೊಯ್ಯುವುದಾಗಿ ಹೇಳಿರುವ ಪ್ರತಿಭಟನಾ ನಿರತ ಪೋಷಕರು ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿವಂತೆ ಆಗ್ರಹಿಸಿದ್ದಾರೆ.