DAKSHINA KANNADA
ಪುತ್ತೂರು – ಕೋಳಿ ಫಾರ್ಮ್ ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ….ವಿಡಿಯೋ ಪತಿಗೆ ಕಳುಹಿಸಿದ ಆರೋಪಿ

ಪುತ್ತೂರು ಜೂನ್ 15: ಕೋಳಿ ಫಾರ್ಮ್ ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೇಲೆ ಫಾರ್ಮ್ ನೋಡಿಕೊಳ್ಳುತ್ತಿದ್ದ ವ್ಯಕ್ತಿ ಅತ್ಯಾಚಾರ ನಡೆಸಿ ಅದರ ವಿಡಿಯೋವನ್ನು ಆಕೆಯ ಪತಿಗೆ ಕಳುಹಿಸಿ ಬೆದರಿಕೆ ಒಡ್ಡಿದ ಘಟನೆ ನಡೆದಿದ್ದು, ಸಂತ್ರಸ್ತ ಮಹಿಳೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅರಿಯಡ್ಕ್ ಗ್ರಾಮದ ಮಡ್ಯಂಗಳ ಸೆರೆನ್ ಕೋಳಿ ಫಾರ್ಮ್ ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೈಟರ್ ಉಮ್ಮರ್ ವಿರುದ್ದ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಆರೋಪಿ ಅತ್ಯಾಚಾರ ನಡೆಸಿ ಅದನ್ನು ವಿಡಿಯೋ ಮಾಡಿದ್ದಲ್ಲದೆ ಅದನ್ನು ಮಹಿಳೆಯ ಪತಿಗೆ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೃತ್ಯ ಮೇ 5 ರಂದು ನಡೆದಿದ್ದು, ಮಹಿಳೆಗೆ ಜೀವಬೇದರಿಕೆ ಇದ್ದಕಾರಣ ತಡವಾಗಿ ದೂರು ನೀಡಿದ್ದಾಗಿ ಸಂತ್ರಸ್ಥೆ ತಿಳಿಸಿದ್ದಾರೆ.