DAKSHINA KANNADA
ಪುತ್ತೂರು – ಗುಡುಗು ಸಿಡಿಲು ಸಹಿತ ಭಾರೀ ಮಳೆ – ಮನೆ ಮೇಲೆ ಬಿದ್ದ ತೆಂಗಿನ ಮರ

ಪುತ್ತೂರು ಎಪ್ರಿಲ್ 08: ಪುತ್ತೂರಿನಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು, ಗಾಳಿ ಅಬ್ಬರಕ್ಕೆ ಮನೆಯೊಂದರ ಮೇಲೆ ತೆಂಗಿನ ಮರ ಬಿದ್ದು ಅಪಾರ ಪ್ರಮಾಣದ ನಷ್ಟಉಂಟಾಗಿದೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಬೇಸಿಗೆ ಮಳೆ ಸುರಿದಿದ್ದು, ಪುತ್ತೂರಿನಲ್ಲಿ ಗುಡುಗು ಸಿಡಿಲಿನ ಸಹಿತ ಭಾರೀ ಮಳೆಯಾಗಿದೆ. ಮಳೆ ಜೊತೆ ಬೀಸಿದ ಗಾಳಿಗೆ ಪುತ್ತೂರು ಬಪ್ಪಳಿಗೆ ಸಮೀಪದ ಗುಂಪಕಲ್ಲಿನಲ್ಲಿ ಮನೆ ಮೇಲೆ ತೆಂಗಿನ ಮರ ಬಿದ್ದಿದೆ ಅಪಾರ ಪ್ರಮಾಣ ನಷ್ಟ ಸಂಭವಿಸಿದೆ.

1 Comment