DAKSHINA KANNADA
ಪುತ್ತೂರು: ಕೌಡಿಚ್ಚಾರ್ ಬಳಿ ಬೈಕ್ ಅಪಘಾತಕ್ಕೆ ವೃದ್ದ ಬಲಿ, ಯುವಕ ಗಂಭೀರ

ಪುತ್ತೂರು, ಮಾರ್ಚ್ 07: ನಗರದ ಹೊರವಲಯದ ಕೌಡಿಚ್ಚಾರ್ ಬಳಿ ಬೈಕೊಂದು ಅಪಘಾತವಾಗಿ ವೃದ್ಧರೋರ್ವರು ಮೃತಪಟ್ಟು, ಯುವಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ಮೃತರನ್ನು ಕಾವು ಮುದ್ಧ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದ್ದು, ಗಾಯಾಳು ಯುವಕನನ್ನು ಉಬರಡ್ಕ ನಿವಾಸಿ ಗುರುಪ್ರಸಾದ್ ಎಂದು ಗುರುತಿಸಲಾಗಿದೆ.

ಅಪಘಾತವಾಗಿ ಬಿದ್ದಿದ್ದ ಗಾಯಾಳುಗಳನ್ನು ಅದೇ ದಾರಿಯಾಗಿ ಕಚೇರಿಯಿಂದ ಬರುತ್ತಿದ್ದ ಪುತ್ತೂರಿನ ಯುವ ನ್ಯಾಯಾವಾದಿ ಚಿನ್ಮಯ್ ರೈ ಈಶ್ವರಮಂಗಲ, ಅರಿಯಡ್ಕ ಶಕ್ತಿ ಕೇಂದ್ರದ ಬಿಜೆಪಿ ಸಚಿನ್ ಪಾಪೆಮಜಲು ಹಾಗೂ ಹಿಂಜಾವೆ ಪ್ರಮುಖ ಜಗದೀಶ್ ಜೊತೆಗೂಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ನಾರಾಯಣ ನಾಯ್ಕ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಸದ್ಯ ಯುವಕನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಲಾಗಿದೆ.