DAKSHINA KANNADA
ಪುತ್ತೂರು – ನೆಲ್ಲಿಕಟ್ಟೆ ನಾಗನಕಟ್ಟೆಗೆ ನುಗ್ಗಿ ಅನ್ಯಮತೀಯ ಯುವಕನಿಂದ ದಾಂಧಲೆ
ಪುತ್ತೂರು ಡಿಸೆಂಬರ್ 05: ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ನಾಗನ ಕಟ್ಟೆಯ ಗೇಟ್‌ಗಳನ್ನು ಮುರಿದು ಹಾನಿ ಮಾಡಿರುವ ಘಟನೆಯೊಂದು ನಡೆದಿದೆ. ಹಾನಿ ಮಾಡಿದ ವ್ಯಕ್ತಿಯನ್ನು ಜಿಡೆಕಲ್ಲು ನಿವಾಸಿ ಮಹಮ್ಮದ್ ಸಲಾಂ ಎಂದು ಗುರುತಿಸಲಾಗಿದ್ದು, ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗ ಒಪ್ಪಿಸಿದ್ದಾರೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಇರುವ ನೆಲ್ಲಿಕಟ್ಟೆಯ ನಾಗನಕಟ್ಟೆಗೆ ಏಕಾಏಕಿ ನುಗ್ಗಿದ ಸಲಾಂ ಗೇಟ್ ಹಾಗು ಇತರ ಸಾಮಾಗ್ರಿಗಳಿಗೆ ಹಾನಿ ಮಾಡಿದ್ದಾನೆ. ನಿನ್ನೆ ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇದನ್ನೂ ಓದಿ…
ಉಡುಪಿ : ಮಣಿಪಾಲದಲ್ಲಿ ಹೋಟೆಲ್ ನೌಕರನ ಕುತ್ತಿಗೆ ಕೊಯ್ದು ಬರ್ಬರ ಕೊಲೆ..!