DAKSHINA KANNADA
ಹೃದಯಾಘಾತಕ್ಕೆ ಬಲಿಯಾದ ಪುತ್ತೂರು ನಗರಸಭಾ ಸದಸ್ಯ ಶಕ್ತಿಸಿನ್ಹಾ

ಪುತ್ತೂರು ಅಕ್ಟೋಬರ್ 17 : ಪುತ್ತೂರು ನಗರಸಭಾ ಸದಸ್ಯ ನೆಲ್ಲಿಕಟ್ಟೆ ನಿವಾಸಿ ಶಕ್ತಿಸಿನ್ಹಾ ಅವರು ಹೃದಯಾಘಾತದಿಂದ ಮಂಗಳವಾರ ಮುಂಜಾನೆ ನಿಧನ ಹೊಂದಿದರು.
ತನ್ನ ಕಿರಿಯ ಮಗಳ ಜೊತೆ ವಾಸವಿದ್ದ ಶಕ್ತಿ ಸಿನ್ಹಾ ಅವರಿಗೆ ಇಂದು ಮುಂಜಾನೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. ಮೃತರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ..
