DAKSHINA KANNADA
ರಾಜ್ಯದಲ್ಲಿ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾಗುವುದಿಲ್ಲ – ಪುತ್ತೂರು ಶಾಸಕ ಅಶೋಕ್ ರೈ

ಪುತ್ತೂರು ಎಪ್ರಿಲ್ 15: ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ವಕ್ಪ್ ಬಿಲ್ ಕರ್ನಾಟಕದಲ್ಲಿ ಜಾರಿಯಾಗುವುದಿಲ್ಲ, ಧಾರ್ಮಿಕ ಮುಖಂಡರುಗಳ ಜೊತೆ ಚರ್ಚೆ ಮಾಡದೆ ಬಿಲ್ ಪಾಸ್ ಮಾಡಿರುವುದು ಖಂಡನೀಯ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ವಕ್ಪ್ ಲ್ ನಮ್ಮ ರಾಜ್ಯದಲ್ಲಿ ಅನುಷ್ಠಾನ ಆಗುವ ಪ್ರಶ್ನೆಯೇ ಇಲ್ಲ, ಹಲವು ಸಂಘಟನೆಗಳು ಈಗಾಗಲೇ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ನ್ಯಾಯಾಲಯದಲ್ಲಿ ಜಯ ಸಿಗಲಿದೆ ಎನ್ನುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ. ಯಾವುದೇ ಮಸೂದೆ ಜಾರಿಗೆ ತರುವುದಿದ್ದರೂ ಆ ಧರ್ಮದವರ ಜೊತೆ ಮಾತುಕತೆ ನಡೆಸಿ ಒಪ್ಪಿಗೆಯಿದ್ದರೆ ಮಾತ್ರ ಜಾರಿಗೆ ತರಬೇಕು, ಧರ್ಮದವರ ವಿರೋಧ ಇದ್ದರೂ ಜಾರಿಗೆ ತರುವುದು ಸರಿಯಲ್ಲ ಎಂದ ಅವರು ಇದು ರಾಜ್ಯದಲ್ಲಿ ಜಾರಿಯಾಗುವುದಿಲ್ಲ ಎಂದು ತಿಳಿಸಿದರು.
