DAKSHINA KANNADA
ನನಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದೆ…ಆದರೆ ಆಗಲು ಸಾಧ್ಯವೇ – ಅಶೋಕ್ ರೈ

ಪುತ್ತೂರು ಎಪ್ರಿಲ್ 24: ಪುತ್ತೂರು ಕಾಂಗ್ರೇಸ್ ನಲ್ಲಿ ದುಷ್ಟಕೂಟಗಳಿವೆ ಎಂದು ಹೇಳಿಕೆ ನೀಡಿದ್ದ ಪುತ್ತೂರು ನಗರ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದ್ ಆಲಿ ಹೇಳಿಕೆಗೆ ಶಾಸಕ ಅಶೋಕ್ ರೈ ಪ್ರತಿಕ್ರಿಯಿಸಿದ್ದು, ಕಾಂಗ್ರೇಸ್ ನಲ್ಲಿ ಅಂತಹ ದುಷ್ಟಕೂಟಗಳಿಲ್ಲ, ಆದರೆ ಅವರ ಅಲೋಚನೆಗೆ ಬಿಟ್ಟಿದ್ದು ಎಂದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಿರುವ ನನ್ನ ವಿರುದ್ಧ ಕಾಂಗ್ರೇಸ್ ನ ಕೆಲವು ದುಷ್ಟಕೂಟಗಳು ಕೆಲಸ ಮಾಡುತ್ತಿವೆ ಮತ್ತು ನಾನು ಪುತ್ತೂರು ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ಆಗುವುದನ್ನು ಇದೇ ದುಷ್ಟಕೂಟ ತಪ್ಪಿಸಿತ್ತು ಎಂದು ಮಹಮ್ಮದ್ ಆಲಿ ಈ ಹಿಂದೆ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಅಶೋಕ್ ಕುಮಾರ್ ರೈ ಮಹಮ್ಮದ್ ಆಲಿ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದಾರೆ. ಅವರಿಗೆ ರಾಜಕೀಯದಲ್ಲಿ ಭಾರೀ ಅನುಭವವೂ ಇದೆ. ಆದರೆ ಕೆಲವು ಸಂದರ್ಭಗಳಲ್ಲಿ ಹುದ್ಧೆಗಳು ಸಿಗುತ್ತವೆ ಎನ್ನುವ ನಿರೀಕ್ಷೆ ಇರೋದು ಸಹಜ. ನನಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇದೆ. ಆದರೆ ಆಗಲು ಸಾಧ್ಯವೇ. ಅದೇ ರೀತಿ ಕೆಲವೊಂದು ವಿಚಾರಗಳನ್ನು ಗಣನೆಗೆ ತೆಗೆದು ಹುದ್ದೆ ನೀಡಲಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
