DAKSHINA KANNADA
ಮಾಧ್ಯಮಗಳ ಪ್ರಶ್ನೆಗೆ ಗರಂ ಆದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು, ನವೆಂಬರ್ 30: ಶಾಸಕರಿಗೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬರುತ್ತಿಲ್ಲ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಗರಂ ಆದ ಘಟನೆ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಶಾಸಕರನ್ನು ಉದ್ದೇಶಿಸಿ ಕೇಳಿದ ಪ್ರಶ್ನೆಗೆ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸ್ಥಳೀಯ ಶಾಸಕ ನಾನೇ, ನಾನು ಅನುದಾನ ಬರುತ್ತಿಲ್ಲ ಎಂದು ಎಲ್ಲಿಯೂ ಹೇಳಿಲ್ಲ, ಜಿಲ್ಲೆಯ ಬೇರೆ ಪಕ್ಷದ ಶಾಸಕರು ಹೇಳ್ತಾ ಇದ್ದಾರೆ.

ಆದರೆ ನಮಗೆ ಅನುದಾನಗಳು ಬರುತ್ತಿದೆ, ಕಾಮಗಾರಿಗಳೂ ನಡೆಯುತ್ತಿದೆ ಎಂದು ಸಚಿವರ ಪರವಾಗಿ ಶಾಸಕ ಅಶೋಕ್ ಕುಮಾರ್ ರೈ ಉತ್ತರ ನೀಡಿದ್ದಾರೆ. ಶಾಸಕರ ಮಾತಿಗೆ ಸಚಿವ ಆರ್.ಬಿ.ತಿಮ್ಮಾಪುರ ಹೌದೆಂದು ತಲೆಯಾಡಿಸಿದ್ದಾರೆ.